

ನಾಗರಮುನ್ನೋಳಿ: ಮಕ್ಕಳ ಜ್ಞಾನ ವೃದ್ಧಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ನಿವೃತ್ತ ಶಿಕ್ಷಕ ಚಂದ್ರಶೇಖರ ಅರಭಾಂವಿ ಹೇಳಿದರು.
ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬದಲ್ಲಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಏಳಿಗೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಿಆರ್‌ಸಿ ಚಿದಾನಂದ ಯಾದಗೂಡೆ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಪಂ ಅಧ್ಯಕ್ಷೆ ರಾಜಮಾ ಮುಲ್ತಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಪಾಧ್ಯಕ್ಷೆ ಶಾಂತಾ ಬಾನೆ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಬಡಿಗೇರ, ರಾಜು ಚವ್ಹಾಣ, ಸಂತೋಷ ಟೊಣಪೆ, ಲಕ್ಷ್ಮೀ ಕುಂಬಾರ, ದಿಲೀಪ್ ಬಸನಾಯ್ಕ, ಅಬ್ದುಲ್ ಬಾಗವಾನ್, ವೈ.ಎಸ್.ಬುಡಗೋಳ, ವಿ.ಎಸ್.ತೋಟದ, ಎ.ಆರ್.ಇಸಾರಗೊಂಡ, ಎಸ್.ಎಸ್.ದಳವಾಯಿ, ಕೆ.ಎಲ್.ಹೂಗಾರ, ಜಿ.ಎಂ.ಮಸರಗುಪ್ಪಿ, ದಾದಾ ಕಾಂಬಳೆ, ಲಕ್ಷ್ಮೀ ಶಿವಾಯಗೋಳ, ಇಬ್ರಾಹಿಂ ಮುಲ್ತಾನಿ ಇತರರಿದ್ದರು.