ಗ್ರಾಮೀಣ ಭಾಗದ ಮಕ್ಕಳಲ್ಲಿ ನಾಯಕತ್ವದ ಗುಣ ಹೆಚ್ಚು

ಜಂಬೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
Published on


ನುಗ್ಗೇಹಳ್ಳಿ : ಗ್ರಾಮೀಣ ಭಾಗದ ಮಕ್ಕಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ನಾಯಕತ್ವದ ಗುಣಗಳಿರುತ್ತವೆ. ಅವರ ಸಾಧನೆ ಗುರುತಿಸಿ ಭದ್ರ ತಳದಿ ಹಾಕಲು ಸರ್ಕಾರಿ ಶಾಲಾ ಶಿಕ್ಷಕರುಗಳು ಮುಂದಾಗುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.


ಹೋಬಳಿಯ ಹತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಂಬೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಇಂದಿನ ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕ ಯುಗದಲ್ಲಿ ಪಟ್ಟಣದ ಖಾಸಗಿ ಮಕ್ಕಳೊಂದಿಗೆ ಸ್ಪರ್ಧಿಸಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟಕರವಾಗಿದೆ. ಗ್ರಾಮೀಣ ಮಕ್ಕಳಲ್ಲಿ ಬುದ್ಧಿವಂತಿಕೆ ಇದೆ. ಅಂತಹ ಮಕ್ಕಳನ್ನು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಪ್ರೋತ್ಸಾಹಿಸಿ ಪ್ರತಿಭಾವಂತರನ್ನಾಗಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.


ರಂಗಗೀತೆ, ರಂಗ ತರಬೇತಿ, ಕೋಲಾಟ, ನಾಟಕ ಕಲಿಸಿ. ರಾಮಾಯಣ, ಮಹಾಭಾರತ ಕಥೆ ಹೇಳಿ ಸಂಸ್ಕಾರವಂತರನ್ನಾಗಿ ಮಾಡಿ. ಗ್ರಾಮೀಣ ಭಾಗದ ರೈತರ ಮಕ್ಕಳೇ ಸೈನಿಕ ಹುದ್ದೆಯಲ್ಲಿ ಹೆಚ್ಚು ದೇಶ ಸೇವೆ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು.


ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಿರಿಯಣ್ಣ ಗೌಡ, ಮುಖಂಡರುಗಳಾದ ಬೆಳಗಳ್ಳಿ ಪುಟ್ಟಸ್ವಾಮಿ, ಎಚ್.ಪಿ.ಸಂಪತ್ ಕುಮಾರ್, ನಾಗರಾಜ್, ಶಾಲಾ ಸಮಿತಿಯ ಅಧ್ಯಕ್ಷ ಧನಂಜಯ, ಮುಖ್ಯ ಶಿಕ್ಷಕ ಜಗದೀಶ್, ಸಿಆರ್‌ಪಿಗಳಾದ ಜ್ಯೋತಿ, ಪದ್ಮ, ಮಂಜೇಗೌಡ, ಸುಮತಾ, ಅನ್ವರ್, ಚಿಕ್ಕೇಗೌಡ, ಮಲ್ಲಿಕಾರ್ಜುನಯ್ಯ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net