ಮಕ್ಕಳ ಸಹಾಯವಾಣಿ ಸೇವೆ

helpline
Published on

ಬೆಳಗಾವಿ: ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್ ನಿರ್ದೇಶನದಂತೆ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಎಲ್ಲ ಮಕ್ಕಳ ಸಹಾಯವಾಣಿ (1098) ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಬೆಳಗಾವಿ ನಗರದಲ್ಲಿ ಮಕ್ಕಳ ಸಹಾಯವಾಣಿ ಯೋಜನೆಯು ಅಕ್ಟೋಬರ್ 2012ರಿಂದ ಜಾರಿಯಲಿದ್ದು, ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯು ಈ ಯೋಜನೆ ಅನುಷ್ಠಾನಗೂಳಿಸುತ್ತಿದೆ.

ದೇಶದೆಲ್ಲೆಡೆ ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳ ತುರ್ತು ರಕ್ಷಣೆ, ಪೋಷಣೆ, ಆರೋಗ್ಯ, ಶಿಕ್ಷಣ, ಸಾಮಾಜಿಕ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಇತರೆ ಅಗತ್ಯ ಪುನರ್ವಸತಿಗಾಗಿ 24್ಡ7 ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕ ಎಂ.ಕೆ. ಕುಂದರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net