ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ

0303
Published on

ರಾಯಬಾಗ: ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ಸರ್ಕಾರ ಹಲವು ಸೌಲಭ್ಯ ನೀಡುತ್ತಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದ್ದಾರೆ.

ತಾಲೂಕಿನ ಹುಬ್ಬರವಾಡಿ ಹಾಗೂ ನಂದಿಕುರಳಿ ಗ್ರಾಮಗಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸೋಮವಾರ ಆರ್‌ಐಡಿಎಫ್ ನಬಾರ್ಡ್ ಯೋಜನೆಯಡಿ ಮಂಜೂರಾದ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಹುಬ್ಬರವಾಡಿ ಶಾಲೆಗೆ 33 ಲಕ್ಷ ರೂ. ವೆಚ್ಚದಲ್ಲಿ 3 ಕೊಠಡಿ ನಿರ್ಮಾಣ ಮತ್ತು ನಂದಿಕುರಳಿ ಶಾಲೆಗೆ 55 ಲಕ್ಷ ರೂ. ವೆಚ್ಚದಲ್ಲಿ 5 ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದೆ.

ಗುತ್ತಿಗೆದಾರರು ಗುಣಮಟ್ಟದ ಕೊಠಡಿ ನಿರ್ಮಿಸಬೇಕು ಎಂದರು. ಅಣ್ಣಾಸಾಬ ಖೇಮಲಾಪುರೆ, ಸದಾನಂದ ಹಳಿಂಗಳಿ, ಬಿ.ಎಂ. ಕುಂದರಗಿ, ವಸಂತ ಲಬ್ಬೆ, ಅಪ್ಪಣ್ಣ ಪಾಟೀಲ, ಅಮಿತ ಜಾಧವ, ಬಾಳಪ್ಪ ಮಗದಣ್ಣವರ, ಆರ್.ಬಿ. ಶಹಾರೆ, ಹನುಮಂತ ಪಾಟೀಲ, ನಿಂಗಪ್ಪ ಪಾಟೀಲ, ಶ್ರವಣ ಕಾಂಬಳೆ, ಪೃಥ್ವಿರಾಜ ಜಾಧವ, ಬಾಬು ವಂಜಿರೆ, ಆರ್.ಕೆ. ನಿಂಗನೂರೆ, ಆರ್.ಬಿ. ಮಣ್ಣೊಡ್ಡರ, ಅನ್ವರ ಮಿರ್ದೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net