ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಾಲೆಗೆ ಕಳುಹಿಸಿ

27 Hanumasagara 1
ಹನುಮಸಾಗರ ಸಮೀಪದ ಮದ್ನಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಲಾಯಿತು. ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ, ಶಿಕ್ಷಕರಾದ ಅಶೋಕ ಕಟ್ಟಿಮನಿ, ಲೀಲಾ ಹೂಗಾರ, ಮಲ್ಲನಗೌಡ ಮಾಲೀಪಾಟೀಲ್, ಯಮನಪ್ಪ, ಕವಿತಾ, ಮಂಜುಳಾ, ಸರೋಜಾ ಇದ್ದರು.
Published on

ಹನುಮಸಾಗರ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ತಪ್ಪದೇ ನಿತ್ಯ ಶಾಲೆಗೆ ಕಳುಹಿಸಬೇಕು ಎಂದು ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ ಹೇಳಿದರು.

ಸಮೀಪದ ಮದ್ನಾಳ ಗ್ರಾಮದ ಸಹಿಪ್ರಾ ಶಾಲೆಯಿಂದ ಶುಕ್ರವಾರ ಹಮ್ಮಿಕೊಂಡ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಿಮಿತ್ತ ಶಾಲೆ ಬಿಟ್ಟ ಮಕ್ಕಳ ಮನೆಗೆ ಬೇಟಿ ನೀಡಿ ಪಾಲಕರ ಮನವೊಲಿಸಿ ಮಾತನಾಡಿದರು. ಈಗಾಗಲೇ ಅ.25ರಿಂದ ಶಾಲೆಗಳು ಆರಂಭವಾಗಿವೆ.

ಪಾಲಕರಾದವರು ಮಕ್ಕಳ ಭವಿಷ್ಯದ ಹಿತಕ್ಕಾಗಿ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಪ್ರಸ್ತುತ ಪರಿಸ್ಥಿತಿಯಿಂದ ಮಕ್ಕಳನ್ನು ಶಾಲೆ ಬಿಡಿಸಿ ಜೀವನ ಹಾಳು ಮಾಡಬೇಡಿ. ಕೆಲಸಕ್ಕೆ ಕಳಿಸುವ ಬದಲಿಗೆ ಪಾಠಶಾಲೆಗೆ ಕಳುಯಿಸಿ, ವಿದ್ಯಾಭ್ಯಾಸಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.

ಗ್ರಾಮದ ಎಲ್ಲ ಮನೆಗಳಿಗೆ ಬೇಟಿ ನೀಡಿ ಮಕ್ಕಳನ್ನು ಶಾಲೆ ಬಿಡಿಸದಂತೆ ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು. ಶಿಕ್ಷಕರಾದ ಅಶೋಕ ಕಟ್ಟಿಮನಿ, ಲೀಲಾ ಹೂಗಾರ, ಮಲ್ಲನಗೌಡ ಮಾಲೀಪಾಟೀಲ್, ಯಮನಪ್ಪ, ಕವಿತಾ, ಮಂಜುಳಾ, ಸರೋಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net