ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ

MAY 19-HRP-02
ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ದೊಡ್ಡತಾಂಡದಲ್ಲಿ ಶಾಲಾ ಶತಮಾನೋತ್ಸವ ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು. ಉಚ್ಚಂಗಿದುರ್ಗ ಗ್ರಾ.ಪಂ. ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮತ್ತಹಳ್ಳಿ ಎಸ್.ಮಂಜುನಾಥ್, ವಿಎಸ್‌ಎಸ್‌ಎನ್ ಅಧ್ಯಕ್ಷ ತಳವಾರ ಮಂಜಪ್ಪ, ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ, ಪ್ರಮುಖರಾದ ಶಶಿಧರ್ ಪೂಜಾರ್, ಕೆ.ಎಂ.ಶಿವಕುಮಾರ್ ಸ್ವಾಮಿ ಇತರರು ಇದ್ದರು.
Published on

ಹರಪನಹಳ್ಳಿ: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಸಂಸ್ಕಾರಯುತವಾಗಿ ಬೆಳೆಸಬೇಕು ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಬೇವಿನಹಳ್ಳಿ ದೊಡ್ಡತಾಂಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 33 ವಷರ್ ಶಾಲೆಯಲ್ಲಿ ಜವಾನನಾಗಿ ಕೆಲಸ ಮಾಡುವ ಜತೆಗೆ ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದರ ಪರಿಣಾಮ ಒಬ್ಬ ವೈದ್ಯನಾಗಿದ್ದು, ಇನೊಬ್ಬ ಐಎಎಸ್ ಅಧಿಕಾರಿಯಾಗಿದ್ದಾರೆ. ಚೆನ್ನಾಗಿ ಓದಿ ಊರು, ಶಾಲೆ, ತಂದೆ-ತಾಯಿಗೆ ಒಳ್ಳೆಯ ಹೆಸರು ತನ್ನಿ ಎಂದರು.

ಬೇವಿನಹಳ್ಳಿ ದೊಡ್ಡ ತಾಂಡಾದ ಗ್ರಾಮಸ್ಥರು ವಿವಿಧ 13 ಬೇಡಿಕೆಗಳನ್ನು ಇಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಈಡೇರಿಸುವುದಾಗಿ ಶಾಸಕ ಭರವಸೆ ನೀಡಿದರು. ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನ್ಯ್ಕಾ, ಉಚ್ಚಂಗಿದುರ್ಗ ಗ್ರಾ.ಪಂ ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮತ್ತಹಳ್ಳಿ ಎಸ್.ಮಂಜುನಾಥ್,

ವಿಎಸ್‌ಎಸ್‌ಎನ್ ಅಧ್ಯಕ್ಷ ತಳವಾರ ಮಂಜಪ್ಪ, ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ, ಪ್ರಮುಖರಾದ ಶಶಿಧರ್ ಪೂಜಾರ್, ಕೆ.ಎಂ.ಶಿವಕುಮಾರ್ ಸ್ವಾಮಿ, ಪೂಮ್ಯನಾಯ್ಕ, ನಿವೃತ್ತ ಶಿಕ್ಷಕ ಕಮಲಾನಂದ, ಮೋಹನ್ ನಾಯ್ಕ, ಕಾಶೀನಾಥ್, ಜಯಮಾಲಾ ಮೋಹನ್‌ನಾಯ್ಕ, ಕೆಂಚನಗೌಡ, ಎಲ್.ಯಶೋಧರ ನಾಯ್ಕ, ಎಲ್.ಮಾಂತೇಶ್ ನಾಯ್ಕ, ಕೆ.ಮಾರುತಿ, ಎಲ್.ಮೋಹನ್ ನಾಯ್ಕ, ಆರ್.ಮಂಜುನಾಥ್, ಶಿವಕುಮಾರ್, ಹಿರಾನಾಯ್ಕ, ಸೋಮ್ಲಾ ನಾಯ್ಕ, ಮಲ್ಲೇಶ್ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net