

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಗಣೇಶ ಲೇಔಟ್ನಲ್ಲಿನ ಎಸ್ವಿಇ ಸೊಸೈಟಿಯ ಶ್ರೀ ವಿಘ್ನೇಶ್ವರ ಆಂಗ್ಲ ಮಾಧ್ಯಮ ಕಿರಿಯ-ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರ್ಯೊತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಮಕ್ಕಳು ರಾಷ್ಟ್ರಭಕ್ತರ ವೇಷ ಧರಿಸಿ ಗಮನ ಸೆಳೆದರು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಮುಖರಾದ ಲಕ್ಷ್ಮಣ ಮಾಳೊದೆ, ಗೀತಾ ಮಾಳೊದೆ, ಪ್ರಾಚಾರ್ಯು ಪ್ರಶೀಲಾ ಕೊಠರ್ಕರ್, ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಬ್ಯಾಹಟ್ಟಿ ಇತರರು ಇದ್ದರು.