ಬೆಣ್ಣೆ ಕಳ್ಳನ ವೇಷದಲ್ಲಿ ಮಿಂಚಿದ ಮಕ್ಕಳು

Untitled design (1)
ರಾಂಪುರ ಗ್ರಾಮದಲ್ಲಿ ಕೃಷ್ಣನ ವೇಷಧರಿಸಿದ ಮಕ್ಕಳ ಮೆರವಣಿಗೆ ನಡೆಸಲಾಯಿತು.
Published on

ಕೊಟ್ಟೂರು: ರಾಂಪುರ ಗ್ರಾಮದ ಜ್ಞಾನತುಂಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬುಧವಾರ ಆಚರಿಸಲಾಯಿತು.

ಶಾಲಾ ಮಕ್ಕಳು ಕೃಷ್ಣನ ವೇಷಧಾರಿಗಳಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಸಾಗುತ್ತಿದ್ದರೆ ಗ್ರಾಮಸ್ಥರು ರಸ್ತೆ ಬದಿಯಲ್ಲಿ ನಿಂತು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಶಾಲೆಯ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕೃಷ್ಣನ ಕುರಿತು ರಚಿಸಲಾದ ಹಾಡುಗಳಿಗೆ ಕೃಷ್ಣನ ವೇಷಧಾರಿಗಳು ನೃತ್ಯ ಮಾಡಿದರು. ಶಾಲೆಯ ಕಾರ್ಯದರ್ಶಿ ಕೆ. ಕೊಟ್ರೇಶ, ಮುಖ್ಯಶಿಕ್ಷಕರು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net