ಆರೋಗ್ಯ ಭಾರತ ನಿರ್ಮಾಣಕ್ಕೆ ಸಹಕರಿಸಿ, ತಹಸೀಲ್ದಾರ್ ಶಂಶಾಲಂ ಮನವಿ

KARAPATRA
ಲಿಂಗಸುಗೂರಿನ ತಹಸಿಲ್ ಕಚೇರಿಯಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನದ ಕರಪತ್ರಗಳನ್ನು ತಹಸೀಲ್ದಾರ್ ಶಂಶಾಲಂ ಹಾಗೂ ನಾನಾ ಇಲಾಖೆ ಅಧಿಕಾರಿ, ಸಿಬ್ಬಂದಿ ಬಿಡುಗಡೆ ಮಾಡಿದರು. ವೈದ್ಯರಾದ ಡಾ.ರವಿಕಿರಣ್, ಡಾ.ಸೂಗೂರೇಶ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ, ಸಿಡಿಪಿಒ ಗೋಕುಲ್, ಶಿಕ್ಷಣ ಇಲಾಖೆ ನೌಕರ ಬಸವರಾಜ, ಪುರಸಭೆ ಸಿಬ್ಬಂದಿ ಹನುಮಂತಪ್ಪ, ರಾಘವೇಂದ್ರ ಇದ್ದರು.
Published on

ಲಿಂಗಸುಗೂರು: ಮಕ್ಕಳಿಗೆ ನಾನಾ ರೋಗಗಳಿಂದ ಮುಕ್ತಿ ನೀಡುವ ಇಂದ್ರಧನುಷ್ ಲಸಿಕೆ ಹಾಕಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ್ ಶಂಶಾಲಂ ಕೋರಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಬುಧವಾರ ಮಾತನಾಡಿದರು. ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸೆ.11 ರಿಂದ 16ರವರೆಗೆ ಆರೋಗ್ಯ ಇಲಾಖೆಯಿಂದ ಇಂದ್ರಧನುಷ್ ಲಸಿಕೆ ನೀಡಲಾಗುತ್ತಿದ್ದು, ಇದರ ಪ್ರಯೋಜನೆ ಪಡೆದು ಆರೋಗ್ಯ ಭಾರತ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಟಿಎಚ್‌ಒ ಡಾ.ಅಮರೇಶ ಪಾಟೀಲ್ ಮಾತನಾಡಿ, ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದು, 1392 ಮಕ್ಕಳು ಹಾಗೂ 171 ಗರ್ಭಿಣಿಯರನ್ನು ಲಸಿಕೆ ಹಾಕಲು ಗುರುತಿಸಲಾಗಿದೆ. ತಾಲೂಕಿನ 104 ಗ್ರಾಮ, ತಾಂಡಾ, ದೊಡ್ಡಿಗಳಲ್ಲಿ ಲಸಿಕೆ ಹಾಕಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ವೈದ್ಯರಾದ ಡಾ.ರವಿಕಿರಣ್, ಡಾ.ಸೂಗೂರೇಶ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್, ತಾಪಂ ಸಹಾಯಕ ನಿರ್ದೇಶಕ ಮಂಜುನಾಥ, ಸಿಡಿಪಿಒ ಗೋಕುಲ್, ಶಿಕ್ಷಣ ಇಲಾಖೆ ನೌಕರ ಬಸವರಾಜ, ಪುರಸಭೆ ಸಿಬ್ಬಂದಿ ಹನುಮಂತಪ್ಪ, ರಾಘವೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net