

ಬೆಳಗಾವಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಕಾರಣ ಎಂದು ಎಸ್‌ಜಿವಿ ಮಹೇಶ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ವಿ. ಭಟ್ಟ ಹೇಳಿದರು.
ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಕೇವಲ ಶಿಕ್ಷಣ ಮಾತ್ರ ನೀಡುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವೆಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಉಪನ್ಯಾಸಕರಿಗೆ ವಿವಿಧ ಮನರಂಜನಾ ಆಟ ಆಡಿಸಲಾಯಿತು. ಆ ಆಟಗಳಲ್ಲಿ ಮಂಗೇಶ ಭಟ್ಟ, ನಾಗರಾಜ ಕುಂದರಗಿ, ಸ್ಮಿತಾ ಪವಾರ ವಿಜೇತರಾಗಿ ಬಹುಮಾನ ಸ್ವೀಕರಿಸಿದರು. ವಿಶಾಲ ಮಿರ್ಜಿ ಇದ್ದರು. ಸೋಹಾ ವಂಟಮುರಿ ಸ್ವಾಗತಿಸಿದರು. ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮೆಹವಿಶ್ ಮುಲ್ಲಾ, ನೇತ್ರಾ ಜವೇಕರ ನಿರೂಪಿಸಿದರು. ಇಕ್ರಾ ಮುಲ್ಲಾ ವಂದಿಸಿದರು.