ಮಕ್ಕಳೇ ಸೇವಾ ಮನೋಭಾವ ಬೆಳೆಸಿಕೊಳ್ಳಿ

6NDR1
Published on

ನಂದೇಶ್ವರ: ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ರಾಷ್ಟ್ರೀಯ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಆಧ್ಯಾತ್ಮಿಕ ಚಿಂತಕ ಶಶಿಕಾಂತ ಗುರೂಜಿ ಹೇಳಿದರು.

ಸಮೀಪದ ಅವರಖೋಡ ಗ್ರಾಮದಲ್ಲಿ ರಡ್ಡೇರಹಟ್ಟಿಯ ಬಸವೇಶ್ವರ ವಿದ್ಯಾ ವಿಕಾಸ ಸಂಸ್ಥೆಯ ಎಸ್.ಬಿ.ಸಾವಂತ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ೭ ದಿನಗಳ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಮಾತ್ರ ಪ್ರಯತ್ನಪಡುತ್ತಿದ್ದಾರೆ. ಅದರ ಜತೆಗೆ ರಾಷ್ಟ್ರೀಯ ಭಾವೈಕ್ಯ, ದೇಶಸೇವೆ, ಸಹಕಾರ ಮನೋಭಾವ ಬಗ್ಗೆ ತಿಳಿದುಕೊಂಡು ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

ಡಾ.ಶಿವಬಸು ನಾಯಿಕ ರೇಬಿಸ್ ರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಾಯಿ ಕಡಿತಕ್ಕೆ ಒಳಗಾದವರಿಗೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದರು. ಡಾ.ಯಮನಪ್ಪ ನಾಗನೂರ ಹಾಗೂ ಅಪ್ಪಾಸಾಹೇಬ ಹಿಪ್ಪರಗಿ ಗ್ರಾಮದ ಬೀದಿ ನಾಯಿಗಳಿಗೆ ರೇಬಿಸ್ ರೋಗದ ಲಸಿಕೆ ನೀಡಿದರು.

ನಾಗನೂರ ಪಿ.ಕೆ. ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಯುವ ಮುಖಂಡ ಈರಣ್ಣಗೌಡ ಪಾಟೀಲ, ಮಹಾದೇವ ಬಿಳಿಕುರಿ, ದಶರಥ ಅಂಬಿ, ಪಾಂಡು ನಿಕ್ಕಂ, ದಶರಥ ಸಾಳುಂಕೆ, ಸದಾಶಿವ ದರೂರ, ಸಚಿನ ಪಾಟೀಲ, ಶಿಬಿರದ ಮುಖ್ಯಸ್ಥ ಎಂ.ಎ.ಚನ್ನಾಪುರ, ಅನಿಲ ಸವದತ್ತಿ, ಸಚಿನ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net