ಮಕ್ಕಳಿಗೆ ಸಂವಿಧಾನ ಮಹತ್ವದ ಶಿಕ್ಷಣ ನೀಡಬೇಕು

26 KMP 02
ಕಂಪ್ಲಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಾದ ಎಚ್.ಎಂ.ಪಂಡಿತಾರಾಧ್ಯ, ಕೊಟ್ಟೂರು ರಮೇಶ, ಆದಿಮನೆ ಹೊನ್ನಪ್ಪ, ಕರೇಕಲ್ ಮನೋಹರ, ಸಚ್ಚಿದಾನಂದರನ್ನು ಗೌರವಿಸಲಾಯಿತು. ಶಾಸಕ ಜೆ.ಎನ್.ಗಣೇಶ್, ತಹಸೀಲ್ದಾರ್ ಶಿವರಾಜ, ಇಒ ಆರ್.ಕೆ.ಶ್ರೀಕುಮಾರ, ಪ್ರಮುಖರಾದ ಭಟ್ಟ ಪ್ರಸಾದ್, ಎನ್.ಹಬೀಬ್‌ರೆಹಮಾನ್ ಇತರರಿದ್ದರು.
Published on

ಕಂಪ್ಲಿ: ಮೀಸಲಾತಿ ಸಮಾನತೆಯ ಪ್ರತೀಕವಾಗಿದ್ದು, ಹಿಂದುಳಿದವರನ್ನು ಸಮಾನತೆಗೆ ತರುವಲ್ಲಿ ಅಂಬೇಡ್ಕರ್ ಪಾತ್ರ ಹಿರಿದಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇಲ್ಲಿನ ಷಾ.ಮಿಯಾಚಂದ್ ಹೈಸ್ಕೂಲ್ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಭಾನುವಾರ ಹಮ್ಮಿಕೊಂಡ 76ನೇಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದರು.

ಮಕ್ಕಳಿಗೆ ಸಂವಿಧಾನ ಮಹತ್ವದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿದ್ದು ಕೆಟ್ಟದಾರಿಯಲ್ಲಿ ಹೋದರೆ ಉತ್ತಮ ಭವಿಷ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ತಹಸೀಲ್ದಾರ್ ಎಸ್.ಶಿವರಾಜ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್ವರೂ ಶಾಂತಿ, ಸುರಕ್ಷತೆ, ಸಹಬಾಳ್ವೆಯ ಜೀವನಕ್ಕಾಗಿ ಸಂವಿಧಾನದ ಆಶಯ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪೊಲೀಸ್, ಗೃಹರಕ್ಷಕ, ಸ್ಕೌಟ್ ಗೈಡ್ಸ್, ಶಾಲಾಮಕ್ಕಳಿಂದ ಧ್ವಜವಂದನೆ, ಪರೇಡ್ ನಡೆಯಿತು. ನಾನಾ ಕ್ಷೇತ್ರಗಳ ಸಾಧಕ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಉಪಾಧ್ಯಕ್ಷೆ ಸುಶೀಲಮ್ಮ ಮತ್ತು ಸದಸ್ಯರು, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಉಪಾಧ್ಯಕ್ಷ ಶರಣಗೌಡ ಮತ್ತು ಸದಸ್ಯರು, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಪಿಐ ಕೆ.ಬಿ.ವಾಸುಕುಮಾರ್, ಉಪ ಪ್ರಾಚಾರ್ಯೆ ಸುಜಾತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net