

ಮಡಿಕೇರಿ:
ಮಡಿಕೇರಿ ದಸರಾ ಜನೋತ್ಸವದಲ್ಲಿ ಶನಿವಾರ (5) ಮಕ್ಕಳ ಕಲರವ ಕಂಡಬರಲಿದೆ. 11 ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಬೆಳಗ್ಗಿನಿಂದಲೇ ಮಕ್ಕಳಿಗಾಗಿ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಹೆಚ್. ಟಿ. ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 9 ಗಂಟೆಯಿAದಲೇ ಗಾಂಧಿ ಮೈದಾನದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳಿಂದ ಮಂಟಪ, ಕ್ಲೇಮಾಡೆಲಿಂಗ್ ಮತ್ತು ಛದ್ಮವೇಷ ಸ್ಪರ್ಧೆಗಳು ಆಯೋಜಿತವಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳ ದಸರಾಕ್ಕೆ ಮಕ್ಕಳು ಹೆಸರು ನೋಂದಾಯಿಸಿಕೊAಡಿದ್ದು ಛದ್ನವೇಷ ಸ್ಪರ್ಧೆಗೇ 130 ಸ್ಪರ್ಧಿಗಳಿದ್ದಾರೆ. ಮಕ್ಕಳ ಅಂಗಡಿಗೆ 80, ಮಕ್ಕಳ ಸಂತೆಗೆ 65 ಮಕ್ಕಳ ಮಂಟಪಕ್ಕೆ 20, ಕ್ಲೇಮಾಡೆಲಿಂಗ್ ಸ್ಪರ್ಧೆಗೆ 23 ಸ್ಪರ್ಧಿಗಳ ನೋಂದಣಿಯಾಗಿದೆ. ಇದೇ ವೇಳೆ ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ಮಕ್ಕಳಿಂದ ವಾದ್ಯ ವೈವಿಧ್ಯ ಕೂಡ ಆಯೋಜಿತವಾಗಿದೆ.
ಸಂಜೆ 6 ಗಂಟೆಯಿAದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 4 ಗಂಟೆಗಳ ಕಾಲ ಮಕ್ಕಳಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ಹುಬ್ಬಳ್ಳಿಯ ಭೂಮಿಕಾ ದೀಪಿಕಾ ಸಹೋದರಿಯರಿಂದ ಗಾನವೈವಿಧ್ಯ, ಮಡಿಕೇರಿಯ ವಿಕ್ರಂಶೆಟ್ಟಿ ಅವರಿಂದ ಮಾಂತ್ರಿಕ ಜಾದೂ ಕಾರ್ಯಕ್ರಮ , ಬನ್ನೂರಿನ ಚಿಲಿಪಿಲಿ ಗೊಂಬೆ ತಂಡದಿAದ ಬೊಂಬೆಗಳ ಕಲರವ ಕೂಡ ಮಕ್ಕಳ ದಸರಾದ ಪ್ರಮುಖ ಆಕರ್ಷಣೆಗಳಾಗಿದೆ.