

ಚಿಕ್ಕಮಗಳೂರು: ಶಿಕ್ಷಣ ಮಕ್ಕಳನ್ನು ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುತ್ತದೆ. ಸಮಾಜದ ಆಗು ಹೋಗುಗಳು, ಒಳಿತು ಕೆಡುಕಗಳ ಪಾಠವನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಅವರ ಸಾಧನೆಗೆ ಸಂಸ್ಥೆ ಬೆನ್ನೆಲುಬಾಗಿ ಶ್ರೀಮಠ ನಿಂತಿದೆ ಎಂದು ಶ್ರೀಆದಿ ಚುಂಚನಗಿರಿ ಮಹಾ ಸಂಸ್ಥಾನದ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಎಐಟಿ ಕಾಲೇಜಿನಲ್ಲಿ ಏರ್ಪಡಿಸಿದ್ಧ ಸರಸ್ವತಿ ಪೂಜೆ ಹಾಗೂ ಪ್ರಥಮ ವರ್ಷದ ಬಿಇ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಅನೇಕ ವಿಷಯದಲ್ಲಿನ ಗೊಂದಲಗಳು ಮತ್ತು ಹೆಚ್ಚಿನ ಕಲಿಕೆಗಾಗಿ ಗುರುಗಳು ಹಾಗೂ ತಮ್ಮ ಹಿರಿಯ ಸಹಪಾಠಿಗಳೊಂದಿಗೆ ಚರ್ಚಿಸಿ ಸ್ಪಷ್ಟತೆ ಪಡೆಯಬೇಕು. ಪಾಲಕರು, ಗುರು ಹಿರಿಯರನ್ನು ಗೌರವಿಸಿ ಮಾಡುವ ಪ್ರತಿ ಕೆಲಸವು ಸಂಪೂರ್ಣವಾಗುತ್ತವೆ. ಹೀಗಾಗಿ ಮಾಡುವ ಕೆಲಸಗಳಿಂದ ಗೌರವ ದೊರಕುವುದಾದರೆ ಆ ಕಾರ್ಯವನ್ನು ಧೈರ್ಯವಾಗಿ ನಿರ್ವಹಿಸಬೇಕು ಎಂದರು.
ಅನ್ವಯಿಕ ವಿಜ್ಞಾನದ ಗಡಿಗಳನ್ನು ತಳ್ಳುವಲ್ಲಿ ಇಂಜಿನಿಯರ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಿರ್ಮಾಣ, ಉತ್ಪಾದನೆ, ಔಷಧ ಮತ್ತು ಇತರೆ ಕ್ಷೇತ್ರಗಳಲ್ಲಿ ಹೊಸ ಎತ್ತರಕ್ಕೆ ತಲುಪಲು ತಾಂತ್ರಿಕ ಶಿಕ್ಷಣ ಸಹಕಾರಿ. ಆರೋಗ್ಯ, ಆಸ್ತಿ, ಆರ್ಥಿಕ ಹಿತಾಸಕ್ತಿ, ಸಾರ್ವಜನಿಕ ಕಲ್ಯಾಣ ಮತ್ತು ಪರಿಸರವನ್ನು ರಕ್ಷಿಸುವುದು ಸೇರಿ ದಂತೆ ಸಮಾಜದ ವಿಶಾಲ ಹಿತಾಸಕ್ತಿಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಂಜಿನಿಯರಿAಗ್ ಒಂದು ಕ್ಷೇತ್ರವಾಗಿದ್ದರೂ ಅದು ಸಮುದಾಯಗಳನ್ನು ರೂಪಿಸುವಲ್ಲಿ ಮತ್ತು ಮಾನವೀಯತೆಯನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇಂದು ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಸುಧಾರಿಸಲು ಮತ್ತು ಹೊಸದಾಗಿ ಆವಿಷ್ಕರಿಸಲು ಮುಂದಾಗಬೇಕು ಎಂದರು.
ಭಾರತೀಯ ಸೈನ್ಯದ ಕಮಾಂಡಿAಗ್ ಅಧಿಕಾರಿ ಪುನೀತ್ ಶರ್ಮ ಮಾತನಾಡಿ, ವಿದ್ಯಾರ್ಥಿಗಳ ಅಗತ್ಯತೆಗೆ ಸಕಲ ಸೌಲಭ್ಯವನ್ನು ಒದಗಿಸಿ ಎಐಟಿ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಜೀವನದಲ್ಲಿ ಶಿಸ್ತುಬದ್ಧತೆಯನ್ನು ಅಳವಡಿಸಿಕೊಳ್ಳಬೇಕು. ಗುರುಗಳು, ಪಾಲಕರಿಗೆ ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಐಟಿ ಕಾಲೇಜು ಸಮಿತಿ ನಿರ್ದೇಶಕ ಸಿ.ಕೆ.ಸುಬ್ಬರಾಯ ಮಾತನಾಡಿ ರಾಜ್ಯದಲ್ಲೇ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಎಐಟಿ ಶ್ರಮಿಸುತ್ತಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಪಣ ತೊಟ್ಟಿರುವ ಸಂಸ್ಥೆ ವಿದ್ಯಾರ್ಥೀಗಳ ಸಾಧನೆಗೆ ಪರಿಣಿತ ಶಿಕ್ಷಕರು ಹಾಗೂ ಕಾಲೇಜು ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸಿದೆ ಎಂದರು. ಅನೇಕ ಕಾಲದಿಂದ ನಿರತವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಐಟಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀಸೋಮೇಶ್ವರನಾಥ ಸ್ವಾಮೀಜಿ, ಎಐಟಿ ಕಾಲೇಜು ಪ್ರಾಚಾರ್ಯ ಸಿ.ಟಿ.ಜಯದೇವ್, ಕಾಲೇಜು ಆಡಳೀತ ಮಂಡಳಿ ಸದಸ್ಯ ಕೆ.ಮೋಹನ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮತ್ತಿತರರಿದ್ದರು.