ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

2
Published on

ಹುಕ್ಕೇರಿ: ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಬಿಸಿಯೂಟ, ಕ್ಷೀರಭಾಗ್ಯ ಹಾಗೂ ಮೊಟ್ಟೆ ವಿತರಣೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳನ್ನು ಜಾರಿಗೊಳಿಸಿವೆ. ಮಕ್ಕಳು ಅವುಗಳ ಪ್ರಯೋಜನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ತಾಲೂಕಿನ ಎಲಿಮುನ್ನೋಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಅಡುಗೆ ಕೊಠಡಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರತಿಭಾವಂತರಲ್ಲಿ ಅನೇಕರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ, ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲು ಹಿಂಜರಿಯಬೇಕಿಲ್ಲ ಎಂದು ಸಲಹೆ ನೀಡಿದರು.

ಗ್ರಾಮದ ಸಂಕನ್ನವರ-ಮರಡಿ ತೋಟದ ರಸ್ತೆ ಹಾಗೂ ಹಣಜ್ಯಾನಟ್ಟಿ-ಬಳೋಬಾಳ ತೋಟದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಗ್ರಾಪಂ ಅಧ್ಯಕ್ಷ ಮೀರಾಸಾಬ ಮುಲ್ತಾನಿ, ಮುಖಂಡರಾದ ಬಸಗೌಡ ಮಗೆನ್ನವರ, ಸುರೇಶ ದೊಡ್ಡಲಿಂಗನವರ, ಕೆಂಪಣ್ಣ ದೇಸಾಯಿ, ಶಶಿಕಾಂತ ದೊಡ್ಡಲಿಂಗನವರ, ಅರುಣ ಹುದ್ದಾರ, ಜಿನಗೌಡ ಇಮಗೌಡನವರ, ಕಲಗೌಡ ಮಲಗೌಡನವರ, ಭೀಮಗೌಡ ಗಿರಿಗೌಡನವರ, ಶೇಖರ ಥರಕಾರ, ಮಕ್ಬುಲ್ ಮುಲ್ಲಾ, ಪರ್ವಿನ್‌ಭಾನು ಪಠಾಣ, ಅಪ್ಪಣ್ಣ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net