ಹಡೆದ ಮಕ್ಕಳಿಗಿಂತ ಪಡೆದ ಮಕ್ಕಳು ಶ್ರೇಷ್ಠರು

Children born are better than children born
ಬಾಗಲಕೋಟೆ ನಗರದ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘವನ್ನು ಡಾ.ಸಪ್ನಾ ಅನಿಗೋಳ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ರಾಜೇಶ್ವರಿ ತೆಗ್ಗಿ, ಐಕ್ಯೂಎಸ್‌ಸಿ ಸಂಯೋಜಕ ಡಾ.ಸಿದ್ದಪ್ಪ ಭೂಮನ್ನವರ, ವಿನಾಯಕ ಹಿರೇಮಠ, ಮಾಲಾ ಗದ್ದಿಗೌಡರ, ಭಾಗ್ಯವತಿ ಯಾವಗಲ್ಲ, ಅಭಿಷೇಕ ಭಾರಕೇರ, ಗೀತಾ ಮಟ್ಟಿಕಲ್ಲಿ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಹಡೆದ ಮಕ್ಕಳಿಗಿಂತ ಪಡೆದ ಮಕ್ಕಳು ಶ್ರೇಷ್ಠರು. ಶಿಕ್ಷಕನು ತನ್ನ ಶಿಕ್ಷಕ ವೃತ್ತಿಯಲ್ಲಿ ತಾನು ಒಂಬತ್ತು ತಿಂಗಳು ಹೆತ್ತು ಹೊತ್ತು ಪಡೆದ ಮಕ್ಕಳಿಗಿಂತ ತನ್ನ ಶಾಲೆಯಲ್ಲಿ ಪಡೆದ ಮಕ್ಕಳನ್ನ ಹೆತ್ತ ಮಕ್ಕಳಂತೆ ಕಾಣುವುದು ಉತ್ತಮ ಲಕ್ಷಣ ಎಂದು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಡಾ.ಸಪ್ನಾ ಅನಿಗೋಳ ಹೇಳಿದರು.

ನಗರದ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕನು ಸಂಪೂರ್ಣ ಪಂಚೇಂದ್ರಿಯಗಳ ಹಿಡಿತ ಸಾಧಿಸಿ ಪಾಠ ಬೋಧಿಸುವುದರಿಂದ ಅದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ ಎಂದರು.

ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕನು ಒಳ್ಳೆಯ ಆಲೋಚನೆ, ಒಳ್ಳೆಯ ವಿಚಾರ, ಒಳ್ಳೆಯ ಹವ್ಯಾಸಗಳನ್ನೂ ತನ್ನ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ರಾಜೇಶ್ವರಿ ತೆಗ್ಗಿ ಮಾತನಾಡಿ, ನಾವು ಬದುಕಿರೋದು ಸಾಯೋದಕ್ಕೆ ಅಲ್ಲ. ಏನಾದರೂ ಸಾಧನೆ ಮಾಡುವುದಕ್ಕೆ ಎಂದರು.
ಐಕ್ಯೂಎಸ್‌ಸಿ ಸಂಯೋಜಕ ಡಾ.ಸಿದ್ದಪ್ಪ ಭೂಮನ್ನವರ, ವಿದ್ಯಾರ್ಥಿ ಪ್ರತಿನಿಧಿಗಳಾದ ವಿನಾಯಕ ಹಿರೇಮಠ, ಮಾಲಾ ಗದ್ದಿಗೌಡರ, ಭಾಗ್ಯವತಿ ಯಾವಗಲ್ಲ, ಅಭಿಷೇಕ ಭಾರಕೇರ, ಗೀತಾ ಮಟ್ಟಿಕಲ್ಲಿ ಉಪಸ್ಥಿತರಿದ್ದರು. ಡಾ. ರಮೇಶ ಯಾನಮಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಪ್ಯಾಟಿಶೆಟ್ಟರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ವೆಂಕಟೇಶ ರೋಡನ್ನವರ ವಂದಿಸಿದರು. ನಾಗರಾಜ ಸರ್ವದೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net