ಭಾರತ ಸೇವಾದಳದ ಟೋಪಿ ಧರಿಸಿ ಆಗಮಿಸಿದ ಮಕ್ಕಳು

30-KGL-2,, (
ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಆದರ್ಶ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಸಮವಸ್ತ್ರ ವಿತರಣೆ ಮಾಡಿದರು. ಪುಷ್ಪಲತಾ ಶಾಂತರಾಜು, ಎಂ.ಮಂಜುಳಾ, ಎಸ್. ಪ್ರಕಾಶ್, ಪ್ರಿಯ ದರ್ಶಿನಿ ಇತರರು ಇದ್ದರು.
Published on

ಕೊಳ್ಳೇಗಾಲ: ಬೇಸಿಗೆ ರಜೆ ಮುಗಿಸಿ ಮೊದಲ ದಿನ ಶಾಲೆಗೆ ಬಂದ ಮಕ್ಕಳನ್ನು ತಾಲೂಕಿನಾದ್ಯಂತ ಶಿಕ್ಷಕರು ಹೂ ನೀಡಿ ಸ್ವಾಗಸಿದರು.

ರಜಾ ದಿನಗಳಲ್ಲಿ ಆಟವಾಡಿ ಸುತ್ತಾಡಿದ ಬಳಿಕ ಶಾಲೆಗೆ ಬರುವ ಮಕ್ಕಳನ್ನು ಬರಮಾಡಿ ಕೊಳ್ಳಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆಯನ್ನು ಕಳೆದ ಎರಡು ದಿನಗಳಿಂದ ಮಾಡಿಕೊಂಡಿತ್ತು. ಶಾಲೆ ಆವರಣ, ಕೊಠಡಿಗಳು ಹಾಗೂ ಅಡುಗೆ ಮಾನೆ ಆವರಣ ಸ್ವಚ್ಛತೆ ಮಾಡಲಾಗಿತ್ತು.

ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಅಂತೆಯೇ, ಶಾಲೆಗೆ ಆಗಮಿಸಿದ ಮಕ್ಕಳಿಗೆ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ಹೂ ನೀಡಿ ಬರಮಾಡಿಕೊಂಡರು. ಮುಡಿಗುಂಡ ಆದರ್ಶ ಶಾಲೆ ಒಳಗೊಂಡಂತೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆಯನ್ನು ಮಾಡಲಾಯಿತು.

ಸೂರಪುರ ಸರ್ಕಾರಿ ಪ್ರೌಢಶಾಲೆಗೆ ಮಕ್ಕಳು ಭಾರತ ಸೇವಾದಳದ ಟೋಪಿ ಧರಿಸಿ ಆಗಮಿಸಿದರು. ಬಿಇಒ ಮಂಜುಳಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮ ವೀಕ್ಷಿಸಿದರು. ಮಧ್ಯಾಹ್ನ ಮಕ್ಕಳಿಗೆ ಸಿಹಿ ಊಟ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net