ಮಕ್ಕಳು ಅಂಕಗಳಿಸುವ ಯಂತ್ರಗಳಲ್ಲ

6sor5
ಸೊರಬ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿಯನ್ನು ರಾಜಪ್ಪ ಮಾಸ್ತರ್ ಉದ್ಘಾಟಿಸಿದರು. ಹೇಮಪ್ಪ, ಮಾರುತಿ, ಸಂಜೀವ್ ಕುಮಾರ್, ರಾಜು ಹಿರವಲಿ, ಹರೀಶ್, ನಾಗರಾಜ, ಉಷಾ ಇತರರಿದ್ದರು.
Published on

ಸೊರಬ: ಮಕ್ಕಳು ಮಾಣಿಕ್ಯದಂತೆ. ಅವರಲ್ಲಿನ ಪ್ರತಿಭೆಗಳನ್ನು ಅನಾವರಣಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು. ಬುಧವಾರ ಪಟ್ಟಣದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರೌಢಶಾಲೆ ವಿಭಾಗದ ಕಸಬಾ ವಲಯದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ನಿರ್ಮಿಸದೆ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಣೆ ನೀಡಿ. ಉತ್ತಮ ಪ್ರತಿಭೆ ಹೊರಬರದಿದ್ದರೆ ವ್ಯಕ್ತಿಯಲ್ಲಿ ಮಾನಸಿಕ ಒತ್ತಡದಿಂದ ಅಶಿಸ್ತು ಮೂಡುತ್ತದೆ. ಅಲ್ಲದೆ ವಿದ್ಯಾರ್ಥಿಗಳ ಮೊಬೈಲ್ ಬಳಕೆ ಆರೋಗ್ಯಪೂರ್ಣವಾಗಿ ಇದ್ದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಹೇಮಪ್ಪ, ಮುಖ್ಯಶಿಕ್ಷಕ ಮಾರುತಿ, ಸಂಜೀವ್‌ಕುಮಾರ್, ರಾಜು ಹಿರಿಯವಲಿ, ಹರೀಶ್, ಷಣ್ಮುಖಾಚಾರ್, ಶಿಕ್ಷಕರಾದ ನಾಗರಾಜ್, ಉಷಾ, ಮಂಗಳಾ ರಾಥೋಡ್, ಸುಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net