15-18 ವರ್ಷದ ಎಲ್ಲ ಮಕ್ಕಳಿಗೆ ಕೋವಿಡ್ ಲಸಿಕೆ ಕಡ್ಡಾಯ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ

030122 Masabahanchinala Covid Vacciane
ಕುಕನೂರು ತಾಲೂಕು ಮಸಬಹಂಚಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ 15 ರಿಂದ 18 ವರ್ಷದವರೆಗಿನ ಮಕ್ಕಳ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ರುವಾರಿ ಸಚಿವ ಹಾಲಪ್ಪ ಆಚಾರ್ ಚಾಲನೆ ನೀಡಿದರು.
Published on

ಕುಕನೂರು: ಬೆಂಬಿಡದ ಭೂತವಾಗಿ ಕಾಡುತ್ತಿರುವ ಕರೊನಾ ತಡೆಗಟ್ಟಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಶ್ರೀಮತಿ ಗೌರಮ್ಮ ಬಸಪ್ಪ ಆಚಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ 15 ರಿಂದ 18 ವರ್ಷದವರೆಗಿನ ಮಕ್ಕಳಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾಮಾರಿ ಕರೊನಾದಿಂದ ಈಗಾಗಲೇ ನೂರಾರು ಜನರು ಮೃತಪಟ್ಟಿದ್ದಾರೆ. ಮತ್ತಷ್ಟು ಜನರನ್ನು ಕಳೆದುಕೊಳ್ಳುವುದು ಬೇಡ. ಆದ್ದರಿಂದ ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ 15 ರಿಂದ 18 ವರ್ಷದ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸುವುದು ಕಡ್ಡಾಯ. ಬೇರೆಯವರನ್ನೂ ಮನವೊಲಿಸಿ ಹಾಕಿಸಬೇಕು ಎಂದು ತಿಳಿಸಿದರು.

ಪ್ರತಿ ದಿನ ಆಯ್ದ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ನಿಗದಿತ ವೇಳಾಪಟ್ಟಿ ಅನ್ವಯ ಲಸಿಕಾಕರಣ ನಡೆಯಲಿದೆ. ಪಾಲಕರು ಕೋವಿಡ್-19 ಲಸಿಕೆಯನ್ನು ಮಕ್ಕಳಿಗೆ ಮರೆಯದೆ ಕೊಡಿಸಬೇಕು ಎಂದರು.

ತಾಪಂ ಇಒ ಸೋಮಶೇಖರ್ ಬಿರಾದಾರ್, ಟಿಎಚ್‌ಒ ಸುನೀಲ್, ಪಿಎಚ್‌ಸಿ ವೈದ್ಯ ಪ್ರಕಾಶ್, ಶಾಲೆಯ ಮುಖ್ಯಶಿಕ್ಷಕ ಲಿಂಗರಾಜ ಅಬ್ಬಿಗೇರಿ, ಪಿಡಿಒ ವೈಜನಾಥ ಪಾಟೀಲ್, ಮುಖಂಡರಾದ ಪ್ರಭು ಆಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net