ಸಿದ್ದಾಪುರ ತಾಂಡದಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್

Child Marriage
Published on

ನ್ಯಾಮತಿ: ನಿಶ್ಚಯವಾಗಿದ್ದ 17 ವರ್ಷದ ಬಾಲಕಿಯ ವಿವಾಹ ತಡೆಯುವಲ್ಲಿ ನ್ಯಾಮತಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೋಮವಾರ ಯಶಸ್ವಿಯಾಗಿದ್ದಾರೆ.

ತಾಲೂಕಿನ ಸಿದ್ದಾಪುರ ತಾಂಡವೊಂದರ ಬಾಲಕಿಯ ವಿವಾಹ ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯ ಕೋಟೆಹಾಳ್ ಗ್ರಾಮದ ಯುವಕನೊಂದಿಗೆ ಜೂ. 28 ರಂದು ನಡೆಯಬೇಕಿತ್ತು. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನ್ಯಾಮತಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಲೆಯ ಮುಖ್ಯಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯ ಸಹಕಾರದೊಂದಿಗೆ ಯುವತಿಯ ಮನೆಗೆ ಧಾವಿಸಿದರು.

ವತಿಯ ಪಾಲಕರಿಗೆ ಕಾನೂನಿನ ಅರಿವು ಮೂಡಿಸಿ ಮದುವೆ ತಡೆಯಲಾಗಿದೆ ಎಂದು ನ್ಯಾಮತಿ ಪೊಲೀಸ್ ಠಾಣೆಯ ಪಿಎಸ್‌ಐ ಜಯ್ಯಪ್ಪ ನಾಯ್ಕ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಕುಂತಲಾ, ಮಕ್ಕಳ ಸಹಾಯವಾಣಿಯ ನೌಕರ ಶಂಕರ್, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ಮೋಹನಾ, ಮುಖ್ಯಶಿಕ್ಷಕಿ ವರಮಹಾಲಕ್ಷ್ಮಿ, ಪೊಲೀಸ್ ಸಿಬ್ಬಂದಿ ಮಂಜುನಾಥ್, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net