ಮಕ್ಕಳ ಕ್ಯಾನ್ಸರ್ ಜಾಗೃತಿ ಮಾಸಾಚರಣೆ

h6-children cancer
Published on

ಹುಬ್ಬಳ್ಳಿ: ಹುಬ್ಬಳ್ಳಿ ಹಾಸ್ಪೀಸ್ ಟ್ರಸ್ಟ್ ಹಾಗೂ ನವನಗರ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ಮಕ್ಕಳ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ನವನಗರದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಇನ್ನರ್‌ವ್ಹೀಲ್ ಕ್ಲಬ್ ನವನಗರ ಅಧ್ಯಕ್ಷೆ ಸುಮಾ ಪಾಟೀಲ ಉದ್ಘಾಟಿಸಿ ಮಾತನಾಡಿ, ಹಾಸ್ಪೀಸ್ ಟ್ರಸ್ಟ್ ಸಮಾಜ ಸೇವೆಗೆ ಸದಾ ಶ್ರಮಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ತೊಡಗಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಸಿ. ಡೇಕಾ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ಡಾ.ಎ. ಸಿ. ಡೇಕಾ, ಖಜಾಂಚಿ ಡಾ. ಸತೀಶ ತಾಳಿಕೋಟಿ ಉಪನ್ಯಾಸ ನೀಡಿದರು.

ಟ್ರಸ್ಟ್ ಅಧ್ಯಕ್ಷೆ ಡಾ. ನಿಜೋರಾ ಡೇಕಾ, ರೋಟರಿ ಶಾಲೆ ಪ್ರಾಚಾರ್ಯೆ ವಿಜಯಶ್ರೀ ಕಲಬುರ್ಗಿ,

ವಿದ್ಯಾರ್ಥಿಗಳಾದ ಸೇಹ್ರಿಶ್, ಪ್ರತಿಕ್ಷಾ, ಪ್ರಾರ್ಥನ್, ಫರ್ಹಾನ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net