ಶಿಶುಪಾಲನಾ ಕೇಂದ್ರಗಳಲ್ಲಿನ ಸೌಲಭ್ಯ ಪರಿಶೀಲನೆ

13-DVD-3
Published on

ದೇವದುರ್ಗ: ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಶಿಶುಪಾಲನೆ ಕೇಂದ್ರಗಳ ಸ್ಥಿತಿಗತಿ ತಿಳಿಯಲಾಗುತ್ತಿದೆ ಎಂದು ರಾಜ್ಯ ಮೊಬೈಲ್ ಕ್ರೆಚೆಸ್ ಸಂಸ್ಥೆ ಅಧಿಕಾರಿ ಚಿದಾನಂದ ಹೇಳಿದರು.

ಮಸರಕಲ್, ಮುಷ್ಟೂರು ಹಾಗೂ ಕ್ಯಾದಿಗೇರಾ ಗ್ರಾಮದ ಕೂಸಿನ ಮನೆಗಳಿಗೆ (ಶಿಶುಪಾಲನೆ ಕೇಂದ್ರ) ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಅಂಗನವಾಡಿ ಕೇಂದ್ರಗಳು ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಾಪಾಡಲು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿವೆ. ಸೂಕ್ಷ್ಮ ಪ್ರದೇಶದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಶಿಶುಪಾಲನಾ ಕೇಂದ್ರ ತೆರೆದು ಅಗತ್ಯ ಸೌಲಭ್ಯ ಒದಗಿಸಲಾಗುತ್ತಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕೇಂದ್ರದಲ್ಲಿನ ಕೊರತೆಗಳ ಪಟ್ಟಿ ಮಾಡಿ, ಪರಿಹಾರಕ್ಕಾಗಿ ಸಲಹೆ-ಸೂಚನೆಗಳೊಂದಿಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net