

ವಿಜಯವಾಣಿ ಸುದ್ದಿಜಾಲ ಇಂಡಿ
ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಯುವಾಗ ಮಾರ್ಗ ಮಧ್ಯದಲ್ಲಿಯೇ ಕಾರಿನಲ್ಲಿ ಹೆರಿಗೆ ಆದ ಟನೆ ತಾಲೂಕಿನ ನಾದಕೆಡಿ ಗ್ರಾಮದಲ್ಲಿ ನಡೆದಿದೆ.
ಕಾಶಿಬಾಯಿ ತೆನೆಹಳ್ಳಿ ಎಂಬ ಮಹಿಳೆಯೇ ಹೆರಿಗೆ ನೋವಿನಿಂದ ಬಳಲು ಆರಂಭಿಸಿದಾಗ ಇಂಡಿ ಆಸ್ಪತ್ರೆಗೆ ಕಾರಿನಲ್ಲಿ ಕರೆದ್ಯೂಯುತ್ತಿದ್ದರು. ಸಾಲೋಟಗಿ ಗ್ರಾಮದ ಹತ್ತಿರ ಬಂದಾಗ ನೋವು ತೀವ್ರಗೊಂಡಿದೆ. ಆಗ ಪಕ್ಕದಲ್ಲಿಯೇ ಇದ್ದ ತೋಟದ ಮಾಲೀಕರ ನೆರವು ಪಡೆದು ಕಾರಿನಲ್ಲಿಯೇ ಹೆರಿಗೆ ಮಾಡಿಸಲಾಗಿದೆ.
ಹೆರಿಗೆ ನಂತರ ತಾಯಿ ಮತ್ತು ನವಜಾತ ಗಂಡು ಮಗುವನ್ನು ಇಂಡಿ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಅಲ್ಲಿ ಚಿಕ್ಕ ಮಕ್ಕಳ ತ ಡಾ.ವಿಪುಲ್ ಕೋಳೆಕರ, ಡಾ.ಪ್ರಶಾಂತ ಧೂಮಗೊಂಡ ಅವರು ತಾಯಿ ಮತ್ತು ಮಗು ಆರೋಗ್ಯವಾಗಿರುವುದನ್ನು ಖಚಿತಪಡಿಸಿದ್ದಾರೆ.