ಏನಾಗಿತ್ತು: ಗೋದೂರು ಗ್ರಾಮದ ಸೋಮಕುಮಾರ್ ಮತ್ತು ಪೂರ್ಣಿಮಾ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರ ನಡುವೆ ಆಗ್ಗಾಗೆ ಜಗಳ ಉಂಟಾಗುತ್ತಿತ್ತು. ಮಂಗಳವಾರವೂ ಸಹ ಇಬ್ಬರ ನಡುವೆ ಜಗಳ ಆರಂಭಗೊಂಡು ಇದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಪೂರ್ಣಿಮಾ ಮನೆಯಲ್ಲಿದ್ದ ಜಿಗಣೆ ಔಷಧಿ ಲಕ್ಷ್ಮಣ ರೇಖೆಯನ್ನು ಕಲಸಿಕೊಂಡು ತಾನು ಕುಡಿದು ತನ್ನ ಮಗು ದೀಕ್ಷಿತ್ ಗೌಡನಿಗೂ ಕುಡಿಸಿದ್ದಾಳೆ.