ಐಬಿಆರ್​ನಲ್ಲಿ ಹೆಸರು ದಾಖಲಿಸಿದ ಬಾಲಪ್ರತಿಭೆ ಅನ್ವಿಕಾ

New Anwika New
Published on

ಹುಬ್ಬಳ್ಳಿ : ಇಲ್ಲಿನ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲ ಪ್ರತಿಭೆ ಅನ್ವಿಕಾ ಸುಲ್ತಾನಪುರ ಇಂಡಿಯಾ ಬುಕ್ ಆಫ್ ರಿಕಾರ್ಡ್ಸ್(ಐಬಿಆರ್)ನಲ್ಲಿ ಹೆಸರು ದಾಖಲಿಸಿದ್ದಾಳೆ.

ಕಳೆದ ಜುಲೈ 30ರಂದು ಅನ್ವಿಕಾ ಅಸಾಧಾರಣ ಸ್ಮರಣೆ ಮತ್ತು ಅರಿವಿನ ಶಕ್ತಿ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆದರು.

ದೇಶದ 28 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿ, 1 ರಿಂದ 100 ಅಂಕಿವರೆಗೆ ಸ್ಪೆಲ್ಲಿಂಗ್, ಭಾರತದ 15 ರಾಷ್ಟ್ರಪತಿಗಳು ಮತ್ತು 18 ಪ್ರಧಾನಿಗಳನ್ನು ಕಾಲಕ್ರಮದಲ್ಲಿ ಗುರುತಿಸುವುದು, 1 ರಿಂದ 15ರವರೆಗೆ ಗುಣಾಕಾರ ಕೋಷ್ಠ ಪಠಣೆ, 10 ಸಂಕಲನ ಮತ್ತು ವ್ಯವಕಲನ ಪರಿಹರಿಸುವುದು, ಜರ್ವಿುನೇಶನ್ ಕುರಿತ ಭಾಷಣ ಮಾಡುವ ಮೂಲಕ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿದ್ದಾಳೆ. ಅಸಾಧಾರಣ ಜ್ಞಾನ ಮತ್ತು ಪ್ರತಿಭೆಯುಳ್ಳ 6 ವರ್ಷ, 2 ತಿಂಗಳಿನ ಅನ್ವಿಕಾ, ಐಬಿಆರ್​ನಲ್ಲಿ ಹೆಸರು ದಾಖಲಿಸಿದ್ದಾಳೆ.

ಅನ್ವಿಕಾಳ ದಾಖಲೆ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆಯ ಅಸಾಧಾರಣ ಜ್ಞಾನ, ಪ್ರತಿಭೆಗಳು ಆಕೆಯೊಂದಿಗೆ ಓದುತ್ತಿರುವ ಇತರ ಮಕ್ಕಳಿಗೆ ಸ್ಪೂರ್ತಿಯಾಗಿವೆ ಎನ್ನುತ್ತಾರೆ ಶಾಲೆಯ ಪ್ರಿನ್ಸಿಪಲ್ ನೈನಾ ಪಿ.ಸಿ. ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net