ಶಿಶು ಮಾರಾಟ ಸಂಬಂಧ ಪ್ರಕರಣ ದಾಖಲು

child seal issue in koppal district hospital complaint lodge in police station
KOPPAL DISTRICT HOSPITAL
Published on

ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಮಗು ಮಾರಾಟ ವಿಷಯ ಸಂಬಂಧ ನಗರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆಂದು ಬಂದ ಮಹಿಳೆಯರಿಗೆ ಮಗು ಸತ್ತಿದೆ ಎಂದು ಹೇಳಿ ಶಿಶುಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶುಶ್ರೂಷಕಿ ತೈರುನ್ನಿಸಾ ಇದರಲ್ಲಿ ಭಾಗಿಯಾಗಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಕೆಲ ತಿಂಗಳ ಹಿಂದೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಈ ಸಂಬಂಧ ಆಸ್ಪತ್ರೆಯಿಂದ ವರದಿ ಸಲ್ಲಿಕೆಯಾಗಿದ್ದು, ಯಾವೊಂದು ಸ್ಪಷ್ಟ ಮಾಹಿತಿ ಉಲ್ಲೇಖವಾಗಿಲ್ಲ ಎನ್ನಲಾಗಿದೆ.

ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಟಕದ ಅಧಿಕಾರಿಗಳು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆಗೆ ಆಗ್ರಹಿಸಿದ್ದಾರೆ. ಶುಶ್ರೂಷಕಿ ತೈರುನ್ನಿಸಾ ಹೆರಿಗೆಗೆ ದಾಖಲಾಗುವ ಬಡ ಹೆಣ್ಣುಮಕ್ಕಳಿಗೆ ಹೆರಿಗೆ ಮಾಡಿಸುತ್ತಾರೆ. ಬಳಿಕ ಶಿಶು ಸತ್ತಿದೆ, ಅದನ್ನು ತಾವೇ ಮಣ್ಣು ಮಾಡಿದ್ದಾಗಿ ತಿಳಿಸಿ, ತಾನೇ ಆರೈಕೆ ಮಾಡಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ನೀಡುತ್ತಿದ್ದಾಳೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಟನೆ ಸಂಬಂಧ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ 2023 ನವೆಂಬರ್​ 20ರಂದು ದೂರು ಸಲ್ಲಿಕೆಯಾಗಿದೆ. ದೂರು ಉಲ್ಲೇಖಿಸಿ ತನಿಖೆ ನಡೆಸುವಂತೆ ನಿರ್ದೇಶನಾಲಯ ಜಿಲ್ಲಾಧಿಕಾರಿಗೆ 2023 ಡಿಸೆಂಬರ್​ 16ರಂದು ಪತ್ರ ಬರೆದಿತ್ತು. ಬಳಿಕ ಕಿಮ್ಸ್​ ನಿರ್ದೇಶಕರು ತಂಡ ರಚಿಸಿ ದೂರು ಕುರಿತು ವರದಿ ಸಲ್ಲಿಸಿದ್ದಾರೆನ್ನಲಾಗಿದೆ. ಇದರ ಬೆನ್ನಲ್ಲೇ ಪೊಲೀಸ್​ ಪ್ರಕರಣ ದಾಖಲಾಗಿದ್ದು, ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

ಪ್ರಕರಣದ ವಿವರ
ಜಾವಿದ್​ ಎಂಬಾತ ಶುಶ್ರೂಷಕಿ ಸಹೋದರನೆಂದು ದಾಖಲೆ ಸೃಷ್ಟಿಸಲಾಗಿದೆ. ಅಲ್ಲದೇ ಇಶಾನುದ್ದೀನ್​ ಎಂಬ ಮಗು ತೈರುನ್ನಿಸಾ ಅವರ ಮಗನೆಂಬ ಬಗ್ಗೆ ಜನನ ಪ್ರಮಾಣ ಪತ್ರವಿದೆ. 2017 ಏಪ್ರೀಲ್​ 25 ರಂದು ಹೆರಿಗೆಯಾದ ಗಂಡು ಮಗು ಮರಣ ಹೊಂದಿದೆ ಎಂದು ತಿಳಿಸಿದ್ದಾಳೆ. ದಾಖಲೆ ಸೃಷ್ಟಿಸಿ ತಾನೇ ಸಾಕುತ್ತಿದ್ದಾಳೆಂದು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಅನಾಮಧೇಯ ದೂರು ಸಲ್ಲಿಕೆಯಾಗಿದೆ. ಮಕ್ಕಳ ಮಾರಾಟ ಶಿಾರ್ಹ ಅಪರಾಧವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿಯೇ ಈ ರೀತಿ ಟನೆ ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net