

ಮಂಗಳೂರು: ಪಾನಮತ್ತಳಾಗಿ ತಿರುಗಾಡುತ್ತಿದ್ದ ಮಹಿಳೆಯ ಬಳಿಯಿದ್ದ ಎಂಟು ತಿಂಗಳ ಹೆಣ್ಣು ಮಗುವನ್ನು ಪೊಲೀಸರ ಸಹಕಾರದಿಂದ ಚೈಲ್ಡ್ ಲೈನ್ ರಕ್ಷಿಸಿದೆ.
ಸಾರ್ವಜನಿಕರಿಂದ ಚೈಲ್ಡ್ ಲೈನ್ ಗೆ ದೂರು ಬಂದ ಹಿನ್ನೆಲೆಯಲ್ಲಿ ಆಕೆಯಿದ್ದ ಸ್ಥಳಕ್ಕೆ ತೆರಳಿದಾಗ ನಿಜ ವಿಷಯ ಗಮನಕ್ಕೆ ಬಂದಿದೆ. ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಬಾಲಕಿಯರ ವಸತಿ ನಿಲಯದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಮಹಳೆ ಕಳೆದ 15 ದಿನಗಳಿಂದ ಮಗುವನ್ನು ಹಿಡಿದುಕೊಂಡು ಪಾನಮತ್ತಳಾಗಿ ನಗರದಲ್ಲಿ ತಿರುಗಾಡುತ್ತಿದ್ದಳು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಚೈಲ್ಡ್ ಲೈನ್ ಜಿಲ್ಲಾ ಸಂಯೋಜಕ ಧೀಕ್ಷಿತ್ ಅಚ್ರಪ್ಪಾಡಿ, ಸದಸ್ಯರಾದ ಆಶಾಲತಾ ಕುಂಪಲ, ಸಿಬ್ಬಂದಿ ಸುಪ್ರೀತ್ ಆರ್ಲಪದವು, ಕವನ್ ಕಬಕ, ಶೋಭಾ ಹಾಗೂ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.