

ಮಂಗಳೂರು: ನಗರದ ಹೊರವಲಯದ ಪರಾರಿ ಎಂಬಲ್ಲಿ ಮೂರು ದಿನ ಹಿಂದೆ 8ರ ಹರೆಯದ ಬಾಲಕಿ ಮೃತಳಾಗಿ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಹೊರರಾಜ್ಯದ ನಾಲ್ವರು ಯುವಕರನ್ನು ಬಂಧಿಸಲಾಗಿದೆ.
ಪುಟ್ಟ ಬಾಲಕಿಯ ಮೇಲೆ ಆರೋಪಿಗಳು ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಬಾಲಕಿಯ ಮೃತದೇಹ ನ.21ರಂದು ಗಂಜಿಮಠದ ಟೈಲ್ ಫ್ಯಾಕ್ಟರಿ ಚರಂಡಿಯಲ್ಲಿ ಪತ್ತೆಯಾಗಿತ್ತು.
ಮಧ್ಯಪ್ರದೇಶದ ಮೂವರು ಹಾಗೂ ಜಾರ್ಖಂಡದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.