ಮಕ್ಕಳ ಸಂರಕ್ಷಣೆ ಜವಾಬ್ದಾರಿ

ಹಗರಿಬೊಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಐಸಿಡಿಎಸ್ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮ ನಡೆಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಇಮಾಂಬಿ, ಎಸ್ಡಿಎಂಸಿ ಸದಸ್ಯರಾದ ಪಾರ್ವತಮ್ಮ, ಸುರೇಶ, ಜಮಲ್‌ಸಾಬ್, ಮುಖ್ಯಶಿಕ್ಷಕ ಬಸಪ್ಪ ಇತರರಿದ್ದರು.

Published on

ಹಗರಿಬೊಮ್ಮನಹಳ್ಳಿ: ಐಸಿಡಿಎಸ್ ಯೋಜನೆ ಅನುಷ್ಠಾನ ಮಾಡುವ ಮೂಲಕ ದೇಶಾದ್ಯಂತ ಅಂಗವಾಡಿ ಕೇಂದ್ರಗಳು ಆರಂಭವಾದವು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಪಿ.ಇಮಾಂಬಿ ಹೇಳಿದರು.

ಪಟ್ಟಣದ ಚಿಂತ್ರಪಳ್ಳಿ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಹಾಗೂ ಐಸಿಡಿಎಸ್ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಟಿ.ನರಸೀಪುರದಲ್ಲಿ 1975ರ ಅ.2ರಂದು ಅಂಗನವಾಡಿ ಕೇಂದ್ರ ಆರಂಭಿಸಲಾಯಿತು. ಆರು ವರ್ಷದೊಳಗಿನ ಮಕ್ಕಳ ಸಂರಕ್ಷಣೆ, ಬಾಣಂತಿಯರ ಆರೋಗ್ಯ ಜಾಗೃತಿ ಸೇರಿದಂತೆ ಸರ್ಕಾರಿ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತೆಯರದು ಆಗಿದೆ ಎಂದರು.

ಎಸ್ಡಿಎಂಸಿ ಸದಸ್ಯರಾದ ಪಾರ್ವತಮ್ಮ, ಸುರೇಶ, ಜಮಲ್‌ಸಾಬ್, ಮುಖ್ಯಶಿಕ್ಷಕ ಬಸಪ್ಪ, ಪ್ರಮುಖರಾದ ಎಂ.ಗಂಗಾಧರ, ಬೆಳ್ಳಕ್ಕಿ ರಾಮಪ್ಪ, ನಾಗರಾಜ, ಕಾರ್ಯಕರ್ತೆಯರಾದ ಎಚ್.ದುರುಗಮ್ಮ, ಬಸಮ್ಮ, ಸಹಾಯಕಿಯರಾದ ತಿಮ್ಮಕ್ಕ, ಚನ್ನಬಸಮ್ಮ, ಗಿರಿಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net