ಮಗು ಕೊಲೆ ಪ್ರಕರಣ, ನಾಲ್ವರ ಬಂಧನ

Crime Logo
Published on

ಬೆಳಗಾವಿ: ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದಲ್ಲಿ ಬಾಲಕನ ಕೊಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮುರಗೋಡ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಮಹೇಶ್ವರ ಮಾಂಜಿ, ಮಹೇಶ ಮಾಂಜಿ, ರಾಕೇಶ ಮಾಂಜಿ, ಶಿವನಾಥ ಮಾಂಜಿ ಬಂಧಿತರು.

ಶುಕ್ರವಾರ ರಾತ್ರಿ ಆರೋಪಿಗಳು ಮನೆಯಲ್ಲಿ ಮದ್ಯ ಸೇವಿಸಿದ್ದರು. ಈ ವೇಳೆ ಮಹೇಶ್ವರ ಹಾಗೂ ಪತ್ನಿ ರಂಗೀಲಾ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ರಂಗೀಲಾ ಅಲ್ಲಿಂದ ತಪ್ಪಿಸಿಕೊಂಡು ಹೋದಳು. ಆಗ ಮನೆಯಲ್ಲೇ ಮಲಗಿದ್ದ ಮಗುವಿನ ಮೇಲೆ ಮಹೇಶ್ವರ ಮನ ಬಂದಂತೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಕುರಿತು ಮಗುವಿನ ತಾಯಿ ರಂಗೀಲಾ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ರಂಗೀಲಾ ಮೊದಲ ಪತಿ ಬಿಟ್ಟು, ಮಹೇಶ್ವರ ಮಾಂಜಿ ಜತೆಗೆ ಮದುವೆಯಾಗಿದ್ದಳು. ಮೊದಲ ಪತಿಯಿಂದ ಮೂರು ವರ್ಷದ ಮಗು ಕೂಡ ಇವರ ಜತೆ ಇತ್ತು. ಮಗುವನ್ನು ಅವರ ತಂದೆ ಜತೆಗೆ ಕಳಿಸುವಂತೆ ಮಹೇಶ್ವರ ಜಗಳ ಮಾಡುತ್ತಿದ್ದ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net