ಬಾಲ್ಯವಿವಾಹ ತಡೆಗೆ ಶ್ರಮಿಸಲಿ

27KSH1
Published on

ಕೋ.ಶಿವಾಪುರ: ಬಾಲ್ಯದಲ್ಲಿ ವಿವಾಹ ಮಾಡಬಾರದು. ಮಾಡಿದರೆ ಕಠಿಣ ಕಾನೂನು ಶಿೆಗೆ ಗುರಿಯಾಗುತ್ತಾರೆ ಎಂದು ಗ್ರಾಪಂ ಅಭಿವದ್ಧಿ ಅಧಿಕಾರಿ ಸಂಕಪ್ಪ ಪಡಿ ಹೇಳಿದರು.

ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಮೂರ್ಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯ ಅಕ್ಕಪಕ್ಕದಲ್ಲಿ ಕದ್ದು ಮುಚ್ಚಿ ಬಾಲ್ಯವಿವಾಹ ಮಾಡುತ್ತಿದ್ದರೆ, 1098 ಸಹಾಯವಾಣಿಗೆ ತಿಳಿಸುವಂತೆ ಹೇಳಿದರು. ಅಂಗನವಾಡಿ ಕಾರ್ಯಕರ್ತೆ ಭಾರತಿ ಮಠದ ಅವರು, ವಿದ್ಯಾರ್ಥಿಗಳಿಂದ ಬಾಲ್ಯ ತಡೆಗಟ್ಟುತ್ತೇವೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕಿಯರಾದ ಸರಸ್ವತಿ ಚಿಗರಿ, ಶಿವಲೀಲಾ ಸಂಭಾಳದ, ಅನಿತಾ ಇತಾಪಿ, ಮಮತಾಜ್​ ಮುಲ್ಲಾ, ಸರಸ್ವತಿ ಬೆಟಸೂರ, ಮಂಜುಳಾ ಪಾಟೀಲ, ಸರಸ್ವತಿ ಚಿಗರಿ, ಎ.ಎಸ್​. ಮುಲ್ಲಾ, ಮಹಾದೇವ ಜಕ್ಕನ್ನವರ, ಎಸ್​.ಎಂ.ಪಾಟೀಲ, ಮಹಾಂತೇಶ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net