ಬಾಲ್ಯ ವಿವಾಹ ಪದ್ಧತಿಗೆ ತಡೆ ಅಗತ್ಯ

ಅರಕಲಗೂಡು ತಾಲೂಕು ಮೋಕಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ  ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ್ ಉದ್ಘಾಟಿಸಿದರು. ಕಾವ್ಯಾ, ವೆಂಕಟೇಶ್ ಇದ್ದರು.
ಅರಕಲಗೂಡು ತಾಲೂಕು ಮೋಕಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ್ ಉದ್ಘಾಟಿಸಿದರು. ಕಾವ್ಯಾ, ವೆಂಕಟೇಶ್ ಇದ್ದರು.
Published on

ಅರಕಲಗೂಡು:  ಬೇಟಿ ಬಚಾವ್ ಬೇಟಿ ಪಡಾವ್ ಯೋಜನೆ ಜಾರಿಯಾದ ನಂತರ ಕುಸಿಯುತ್ತಿದ್ದ ಲಿಂಗಾನುಪಾತ ಏರಿಕೆಯಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ್ ತಿಳಿಸಿದರು.

ತಾಲೂಕಿನ ಮೋಕಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಬಾಲ್ಯ ವಿವಾಹ ತಡೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಟಿ ಬಚಾವ್ ಬೇಟಿ ಪಡಾವ್ ಯೋಜನೆ ಜಾರಿಯಾಗಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದಲ್ಲಿ ಬಾಲ್ಯ ವಿವಾಹ ಪದ್ಧತಿ ಅಪರಾಧವಾಗಿದ್ದು, ಇದಕ್ಕೆ ತಡೆ ಹಾಕುವುದರ ಜತೆಗೆ ಹೆಣ್ಣು ಬ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದರು.

ಸಬ್ ಇನ್‌ಸ್ಪೆಕ್ಟರ್ ಕಾವ್ಯಾ ಮಾತನಾಡಿ, ಶಾಲಾ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಅನಗತ್ಯ ಸಂಗತಿಗಳಿಂದ ದಾರಿ ತಪ್ಪುತ್ತಿವೆ. ಉತ್ತಮ ವಿಷಯಗಳಿಗಷ್ಟೇ ಮೊಬೈಲ್ ಬಳಕೆ ಮಾಡಬೇಕು. ಪಾಲಕರು ತಮ್ಮ ಮಕ್ಕಳ ಬಗ್ಗೆ ನಿತ್ಯ ನಿಗಾ ವಹಿಸಬೇಕು ಎಂದರು.

ಸಿಡಿಪಿಒ ಎಂ.ಪಿ. ವೆಂಕಟೇಶ್ ಮಾತನಾಡಿ, ಶಾಲಾ ಮಕ್ಕಳಿಗೆ ಇನ್ನೊಂದು ತಿಂಗಳಲ್ಲಿ ಬೇಸಿಗೆ ರಜೆ ಆರಂಭವಾಗಲಿದೆ. ಈ ಸಮಯದಲ್ಲಿ ಮಕ್ಕಳು ಅಪರಿಚಿತರೊಂದಿಗೆ ಬೆರೆಯಬಾರದು. ಅನಗತ್ಯ ವಿಚಾರಗಳಿಗೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.

ವಿವಿಧ ಶಾಲಾ ಮಕ್ಕಳಿಗೆ ಬಾಲ್ಯ ವಿವಾಹ ತಡೆ ಕುರಿತು ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net