ಬಾಲ್ಯವಿವಾಹ ಅಪರಾಧ

24KOLAVI1
Published on

ಕೊಳವಿ: ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಬಾಲ್ಯವಿವಾಹ ನಿಷೇಧ ಜಾಗೃತಿ ಜಾಥಾ ನಡೆಯಿತು.

ಗ್ರಾಪಂ ಅಭಿವದ್ಧಿ ಅಧಿಕಾರಿ ಸಂಜುಕುಮಾರ ಜೋತಾವರ ಮಾತನಾಡಿ, ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ 18 ವರ್ಷ ತುಂಬಿದ ಮೇಲೆ ವಿವಾಹಕ್ಕೆ ಮುಂದಾಗಬೇಕು. ಬಾಲ್ಯವಿವಾಹ ಶಿಾರ್ಹ ಅಪರಾಧವಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯ ವಿವಾಹಕ್ಕೆ ಕುಮ್ಮಕ್ಕು ನೀಡಿದರೆ ಸಂಬಂಧಿತರನ್ನು ಶಿೆಗೆ ಒಳಪಡಿಸಲಾಗುತ್ತದೆ. ಬಾಲ್ಯವಿವಾಹ ನಿಷೇಧಕ್ಕೆ ಗ್ರಾಪಂನಿಂದ ಇನ್ನು ಅನೇಕ ಕಾರ್ಯಕ್ರಮ ರೂಪಿಸಿ ಜನರಲ್ಲಿ ಜಾಗತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಸಿಎಚ್​ಒ ಡಾ. ಸಂಜು ಹಟ್ಟಿಗೌಡರ ಮಾತನಾಡಿದರು. ಪ್ರೌಢಶಾಲೆಯ ಮುಖ್ಯಶಿಕ ಎಂ.ಬಿ. ಮುತ್ನಾಳ, ಗ್ರಾಪಂ ಅಧ್ಯ ಕರೆಪ್ಪ ಬಡಿಗವಾಡ, ಮಾಜಿ ಅಧ್ಯೆ ಮಹಾದೇವಿ ಹಟ್ಟಿಗೌಡರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆರಾದ ಮಹಾನಂದ ಕರೆನ್ನವರ, ರೇಣುಕಾ ಪೂಜೇರಿ, ಕೆಂಚವ್ವ ಮೆಳವಂಕಿ, ಚಂಪಾಬಾಯಿ ಬೆಟಗೇರಿ, ನಾಗವ್ವ ಹಂಜಿ, ಸುಶೀಲಾ ಬೆಟಗೇರಿ, ಗ್ರಾಪಂ ಸಿಬ್ಬಂದಿಯಾದ ಅಡಿವೆಪ್ಪ ಬೊಮ್ಮಣ್ಣವರ, ಬಾಳಪ್ಪ ಹರಿಜನ, ಮಾರುತಿ ಕರೆನ್ನವರ, ಭಾರತಿ ಪಾತ್ರೋಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net