ಮದುವೆಗೆ ವಯಸ್ಸಿನ ದೃಢೀಕರಣ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ

16_06_Mdy_05(New Dc Kumar)
Published on

ಮಂಡ್ಯ: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣ ಹೆಚ್ಚುತ್ತಿದ್ದು, ಈ ಹಿನ್ನಲೆ ಕಲ್ಯಾಣ ಮಂಟಪ, ದೇವಸ್ಥಾನ, ಸಮುದಾಯಭವನ, ಮಸೀದಿ ಹಾಗೂ ಚರ್ಚ್‌ನ ಮುಖ್ಯಸ್ಥರು ತಮ್ಮ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ಕಾಯ್ದಿರಿಸುವಾಗ ವಧು-ವರನ ವಯಸ್ಸಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ.

ಲಗ್ನಪತ್ರಿಕೆ ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಮಾಲೀಕರು ವಧು-ವರರ ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪಡೆದು ಪರಿಶೀಲಿಸಬೇಕು. ಬಳಿಕವಷ್ಟೇ ಲಗ್ನಪತ್ರಿಕೆ ಮುದ್ರಣ ಮಾಡಬೇಕು. ಕಲ್ಯಾಣ ಮಂಟಪವನ್ನು ಕಾಯ್ದಿರಿಸಿಬೇಕು. ಜತೆಗೆ ವಧು-ವರರು ತಾವು ಸ್ವ ಇಚ್ಚೆಯಿಂದ ವಿವಾಹವಾಗುತ್ತಿರುವ ಬಗ್ಗೆ ಮತ್ತು ಯಾವುದೇ ರೀತಿಯ ವರದಕ್ಷಿಣೆ ನೀಡದಿರುವ ಅಥವಾ ತೆಗೆದುಕೊಳ್ಳದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಹ ಪಡೆಯಬೇಕು ಎಂದು ಸೂಚಿಸಿದ್ದಾರೆ.

ವಯಸ್ಸಿನ ದೃಢಿಕರಣಕ್ಕೆ ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್ಸಿ ಅಂಕಪಟ್ಟಿ, ಶಾಲಾ ವರ್ಗಾವಣಾ ಪತ್ರ (ಟಿ.ಸಿ) ವನ್ನು ಮಾತ್ರ ಪರಿಗಣಿಸಿಬೇಕು. ಇಲ್ಲದೇ ಕಾನೂನು ಉಲ್ಲಂಘನೆ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು ಮತ್ತು ಕಲ್ಯಾಣ ಮಂಟಪಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net