12 ವರ್ಷದ ಬಾಲಕಿಯೊಂದಿಗೆ 25 ವರ್ಷದ ಯುವಕನ ಮದುವೆ; 8 ಜನರ ವಿರುದ್ಧ ಪ್ರಕರಣ ದಾಖಲು

Crime Logo
Published on

ಸವಣೂರ: 12 ವರ್ಷದ ಬಾಲಕಿಯನ್ನು 25 ವರ್ಷದ ಯುವಕನಿಗೆ ಕೊಟ್ಟು ಮದುವೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಸವಣೂರ ಪೊಲೀಸ್ ಠಾಣೆಯಲ್ಲಿ ಮದುವೆಯಾದ ಯುವಕ ಸೇರಿ 8 ಜನರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ಹಜರತಅಲಿ ಅಬ್ದುಲತೀಪ ಅಬ್ದುಲರಜಾಕನವರ (25), ಅಬ್ದುಲರೆಹಮಾನ ಅಲ್ಲಾಧಿನ ದೇವಸೂರಿ, ಶಬೀನಾ ಅಬ್ದುಲರೆಹಮಾನ ದೇವಸೂರಿ, ಅಬ್ದುಲತೀಪ ನ್ನನೇಮಿಯಾ ಅಬ್ದುಲರಜಾಕನವರ, ಬಶೀರಅಹ್ಮದ್ ಹುಸೇನಮಿಯಾ ಬತ್ತೇರಿ, ಅಬ್ದುಲಖಾದರ ಅಲ್ಲಾವುದ್ದಿನಸಾಬ ದೇವಸೂರಿ, ರಪೀಕ ಅಮೀರಖಾನ ಮಿಟ್ಟೆಖಾನ, ಸುಬಹಾನಿ ಮಹಬೂಬಸಾಬ ಚಳ್ಯಾಳ ಸೇರಿ ಇತರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಈ ಕುರಿತು ಸಿಡಿಪಿಒ ಸುಜಾತಾ ಬೇಟಗೇರಿ ಎಂಬುವರು ದೂರು ನೀಡಿದ್ದಾರೆ. ಆರೋಪಿತರು 12 ವರ್ಷದ ಬಾಲಕಿಯನ್ನು ಕರೆದುಕೊಂಡು ಬಂದು ಹಜರತಅಲಿ ಅಬ್ದುಲತೀಪ ಅಬ್ದುಲರಜಾಕನವರ ಎಂಬುವನೊಂದಿಗೆ ಬಾಲ್ಯವಿವಾಹ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net