

ಚಿಕ್ಕೋಡಿ: ಬಾಲಕಾರ್ಮಿಕ ಪದ್ಧತಿಯು ಸಮಾಜಕ್ಕೆ ಅಂಟಿಕೊಂಡ ದೊಡ್ಡ ಪಿಡುಗಾಗಿದ್ದು, 14 ವರ್ಷಕ್ಕಿಂತ ಒಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸಗಳಿಗೆ ಮತ್ತು ಇತರ ಕೆಲಸಗಳಿಗೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಚಿಕ್ಕೋಡಿ ವಕೀಲರ ಸಂಘ ಸದಸ್ಯ ಟಿ.ಎಚ್.ಕದಮ್ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬಿರುತ್ತದೆ. ಹಾಗಾಗಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 1986 ರಂದು ಬಾಲ ಕಾರ್ಮಿಕರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಬಾಲಕಾರ್ಮಿಕರು ಅಂದರೆ 14 ವರ್ಷಕ್ಕಿಂತ ಒಳಗಿನ ಮುಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.\
ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ.ಸೊಲ್ಲಾಪುರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನು ಸಲಹಾ ಕೇಂದ್ರದ ಮುಖ್ಯಸ್ಥ ಡಿ.ಬಿ. ಪಾಟೀಲ, ವಿ.ಎಸ್. ಬಿಳಗಿ, ಎಸ್.ಬಿ.
ನಾಗರಾಳೆ, ಪಿ.ಸಿ.ಚವ್ಹಾಣ, ಡಿ.ಎಸ್.ರವತೆ, ಪಿ.ಎಂ.ಕಮತೆ ಕೆ.ಎಲ್.ಕಾಂಬಳೆ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್. ಡಿ. ಖಾಜಿ ಸ್ವಾಗತಿಸಿದರು. ಪ್ರತಿಷ್ಠಾ ಶೆಟ್ಟಿ ನಿರೂಪಿಸಿದರು. ಭಾವನಾ ಸಮಯ ವಂದಿಸಿದರು.