ರಾಯಚೂರಲ್ಲಿ ಇಬ್ಬರು ಬಾಲಕಾರ್ಮಿಕರ ರಕ್ಷಣೆ, ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ

280220 Raichur Child Labor Protect
Published on

ರಾಯಚೂರು: ನಗರದ ವಿವಿಧ ಉದ್ದಿಮೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇಬ್ಬರು ಬಾಲಕರನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಶುಕ್ರವಾರ ದಾಳಿ ನಡೆಸಿದ ಬಾಲಕಾರ್ಮಿಕ ಯೋಜನೆ ಘಟಕದ ಅಧಿಕಾರಿಗಳು ಮತ್ತು ತಂಡ ವಿವಿಧ ಉದ್ದಿಮೆಗಳ ತಪಾಸಣೆ ಮಾಡಿದಾಗ ನಗರದ ಈಟ್ಸ್ ಆ್ಯಂಡ್ ಟ್ರೀಟ್ಸ್ ಬೇಕರಿಯಲ್ಲಿ 12 ವರ್ಷದ ಭಾಷಾ ಅಲಿ, ಪಾನಿಪುರಿ ಸೆಂಟರ್ ನಮ್ಮುನಲ್ಲಿ ರಾಜಸ್ಥಾನ ಮೂಲದ 11 ವರ್ಷದ ಸುರೇಶ ಮೇಣ ಎನ್ನುವ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಮಾಲೀಕರಾದ ಸಮೀರಪಾಷಾ ಅವರ ವಿರುದ್ಧ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಿದ್ದುಪಡಿ ಕಾಯ್ದೆಯಡಿ ಮಾರ್ಕೆಟ್‌ಯಾರ್ಡ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದಾಳಿಯಲ್ಲಿ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥರಡ್ಡಿ, ಕಾರ್ಮಿಕಾಧಿಕಾರಿ ವೆಂಕಟಸ್ವಾಮಿ, ಮಕ್ಕಳ ಸಹಾಯವಾಣಿಯ ಸಂಯೋಜಕ ಸುದರ್ಶನ, ಕಾರ್ಯಕ್ರಮ ಅಧಿಕಾರಿ ರವಿಕುಮಾರ್, ಮಕ್ಕಳ ರಕ್ಷಣ ಘಟಕದ ತಿಕ್ಕಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net