

ಕುಂದಾಪುರ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು, ಅಧ್ಯಯನ ಕ್ವಾಲಿಟಿ ಫೌಂಡೇಶನ್ ಬೆಂಗಳೂರು, ಚಿಲ್ಡ್ರನ್ ಮೂಮೆಂಟ್ಸ್ ಫಾರ್ ಸಿವಿಕ್ ಅವಾರ್ನೆಸ್ ಸಿಎಂಸಿಎ ಬೆಂಗಳೂರು, ಅರ್ಲಿಬರ್ಡ್ಸ್ ನೇಚರ್ ಕನ್ವರ್ಜನ್ಸ್, ನೇಚರ್ ಕನ್ಸರ್ರ್ವೇಟಿವ್ ಫೌಂಡೇಶನ್ ಬೆಂಗಳೂರು, ಶಿಕ್ಷಣ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಉಡುಪಿ ಜಿಪಂ ಹಾಗೂ ಕುಂದಾಪುರ ಮತ್ತು ಬೈಂದೂರು ತಾಪಂ ಸಹಯೋಗದಲ್ಲಿ ಮಕ್ಕಳ ಸ್ನೇಹಿ ಅರಿವು ಕೇಂದ್ರದ ಕುರಿತು ಗ್ರಾಮೀಣ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಎರಡು ದಿನಗಳ ತರಬೇತಿ ಕುಂದಾಪುರ ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆಯಿತು.
ಕುಂದಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಎನ್ಎಸ್ಐಆರ್ಡಿ ವಿಕೇಂದ್ರೀಕೃತ ತರಬೇತಿ ಸಂಯೋಜಕರಾದ ಬಿ.ಮೋಹನಚಂದ್ರ ಕಾಳಾವರಕಾರ್ ಹಾಗೂ ಸುನೀತಾ ಗುಜ್ಜಾಡಿ ತರಬೇತಿ ನೀಡಿದರು. ತಲ್ಲೂರು ಅರಿವು ಕೇಂದ್ರದ ಮೇಲ್ವಿಚಾರಕ ದೀಪ ಶೆಟ್ಟಿ, ಶಿಕ್ಷಣ ಫೌಂಡೇಷನ್ ಉಡುಪಿ ಜಿಲ್ಲಾ ಸಂಯೋಜಕಿ ರೀನಾ ಹೆಗ್ಡೆ, ಶಿಕ್ಷಣ ಫೌಂಡೇಷನ್ ಕುಂದಾಪುರ ತಾಲೂಕು ಸಂಯೋಜಕಿ ಆಶಾ, ತಾಪಂ ಮ್ಯಾನೇಜರ್ ರಾಮಚಂದ್ರ ಮಯ್ಯ ಉಪಸ್ಥಿತರಿದ್ದರು.