

ಹಾವೇರಿ: ಜಿಲ್ಲೆಯ ಸವಣೂರ ಬಸ್ ನಿಲ್ದಾಣದಲ್ಲಿ ದೊರೆತ್ತಿದ್ದ ಒಂದೂವರೆ ವರ್ಷದ ಮಗು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಸೀತಾರಾಮ ಎಂಬ ಹೆಸರಿನ ಮಗು ಮೃತಪಟ್ಟಿರುವುದು.
ಈ ಮಗು ಮೇ 24ರಂದು ಸವಣೂರ ಬಸ್ ನಿಲ್ದಾಣದಲ್ಲಿ ಯಾರೋ ಬಿಟ್ಟು ಹೋಗಿದ್ದರಿಂದ ಪೊಲೀಸರು ಮಗುವನ್ನು ಇಲ್ಲಿಯ ಬಸವೇಶ್ವರ ನಗರದ ದತ್ತು ಸ್ವೀಕಾರ ಕೇಂದ್ರದಲ್ಲಿ ದಾಖಲಿಸಿದ್ದರು. ಮಗು ಒಂದು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.