

ಹುಬ್ಬಳ್ಳಿ: ಇಲ್ಲಿಯ ಸಿದ್ದೇಶ್ವರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ದಳ ಹುಬ್ಬಳ್ಳಿ -ಧಾರವಾಡ ಹಾಗೂ ವಸುಂಧರಾ ಫೌಂಡೇಷನ್ ಸಹಯೋಗದಲ್ಲಿ ಮಕ್ಕಳ ಹಬ್ಬ ಏರ್ಪಡಿಸಲಾಗಿತ್ತು. ಮೇಯರ್ ವೀಣಾ ಬರದ್ವಾಡ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಶ್ರಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಜಿ.ಎನ್. ಮಠಪತಿ, ಹುಡೇದಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ಮೈತ್ರಾ, ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ವಸುಂಧರಾ ಫೌಂಡೇಷನ್ನ ಮೇಘರಾಜ ಕೆರೂರ, ವಿನಾಯಕ, ಪೊಲೀಸ್ ಇಲಾಖೆಯ ಪುಷ್ಪಾ ಹಾಗೂ ಭಾವಿಕಟ್ಟಿ, ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.