

ಕಾರವಾರ:ಆಡುತ್ತಿದ್ದ ಮಗು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಹರಿದೇವನಗರದಲ್ಲಿ ಶನಿವಾರ ನಡೆದಿದೆ.
ಸ್ತುತಿ ಸೂರಜ್ ಬಂಟ್(3.5ವರ್ಷ) ಮೃತ ಬಾಲಕಿ. ಮನೆಯ ಎದುರು ಆಡುತ್ತಿದ್ದ ವೇಳೆ ಮಗು ಬಾವಿಗೆ ಬಿದ್ದಿದೆ.
12.30 ರ ಹೊತ್ತಿಗೆ ಮಗು ಕಾಣೆಯಾದ ಬಗ್ಗೆ ಶಹರ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದರು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಮಗುವಿನ ಶವ ಬಾವಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:ಕಾರು ಡಿಕ್ಕಿ ಮಹಿಳೆ ಸಾವು