ಆಟವಾಡುತ್ತಿದ್ದಾಗ ಮಹಡಿಯಿಂದ ಕೆಳಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು!

Child
Published on

ಕೊಡಗು: ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟರೆ ಅಪಾಯ ಸಾಧ್ಯತೆ ಖಚಿತ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಇಲ್ಲೊಂದು ಮಗು ಮಹಡಿಯಲ್ಲಿ ಆಟವಾಡುತ್ತ ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದೆ.

ಕೊಡಗು ಜಿಲ್ಲೆ ವೀರಾಜಪೇಟೆಯ ಗೌರಿಕೆರೆಯ ಮುನೀರ್​ ಎಂಬವರ ಪುತ್ರ ತಸ್ಲೀನ್ (4) ಮೃತಪಟ್ಟ ಬಾಲಕ. ಈತ ಮನೆಯ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ದುರ್ಮರಣಕ್ಕೀಡಾಗಿದ್ದಾನೆ. ವೀರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net