ಚರಂಡಿಯಲ್ಲಿ ಬಿದ್ದು ಮಗು ಸಾವು

Published on

ವಿಜಯಪುರ: ಮನೆ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಮಗು ಚರಂಡಿಯಲ್ಲಿ ಬಿದ್ದು ಸಾವನಪ್ಪಿದ ಟನೆ ನಗರದ ಜೆ.ಎಂ. ರಸ್ತೆಯ ಕುಂಬಾರ ಓಣಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಇಲ್ಲಿನ ಯಾಸೀನ ಮುಲ್ಲಾ (2) ಮೃತ ದುರ್ದೈವಿ.

ಟನೆ ಹಿನ್ನೆಲೆ : ಇತ್ತೀಚೆಗೆ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಚರಂಡಿಯಲ್ಲಿ ನೀರು ತುಂಬಿಕೊಂಡು ನೀರು ಸರಾಗವಾಗಿ ಹರಿಯುತ್ತಿರಲಿಲ್ಲ.

ಳಿಯರು ಈ ಕುರಿತು ಪಾಲಿಕೆ ಗಮನಕ್ಕೆ ತಂದಿದ್ದರು. ನಂತರ ಸ್ಥಳಕ್ಕೆ ಬಂದಿದ್ದ ಪಾಲಿಕೆ ಸಿಬ್ಬಂದಿ ಚರಂಡಿ ಮೇಲೆ ಛಾವಣಿಗೆ ಹಾಕಿದ ಕಲ್ಲನ್ನು ಪಕ್ಕಕ್ಕೆ ಇರಿಸಿ ತಾತ್ಕಾಲಿಕವಾಗಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದರು. ನಂತರ ವಾರ ಕಳೆದರೂ ಕೂಡ ಚರಂಡಿ ಮೇಲೆ ಛಾವಣಿ ಅಳವಡಿಸಿರಲಿಲ್ಲ. ಅಲ್ಲೇ ಪಕ್ಕದಲ್ಲಿ ಮೃತ ಮಗುವಿನ ಮನೆಯಿದ್ದು, ಬೆಳಗ್ಗೆ 10ರ ಸುಮಾರಿಗೆ ಆಟವಾಡುವ ವೇಳೆ ಮಗುವು ಚರಂಡಿಯಲ್ಲಿ ಬಿದ್ದು ಅಸುನೀಗಿದೆ. ಪಾಲಿಕೆ ರ್ನಿಲಕ್ಷವೇ ಮಗುವಿನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net