ಆಟವಾಡುತ್ತಿದ್ದಾಗ ಸಿಮೆಂಟ್ ಪೈಪ್ ಉರುಳಿ ಮಗು ಸಾವು

death
ಸಾಂದರ್ಭಿಕ ಚಿತ್ರ
Published on

ಮೂಲ್ಕಿ: ಇಲ್ಲಿನ ಕೆಎಸ್‌ರಾವ್ ನಗರದ ಲಿಂಗಪ್ಪಯ್ಯಕಾಡು ಆಶ್ರಯ ಕಾಲನಿಯಲ್ಲಿ ಮನೆ ಸಮೀಪ ಆಡುತ್ತಿದ್ದ ಯುವರಾಜ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ಸಿಮೆಂಟ್ ಪೈಪ್ ಉರುಳಿಬಿದ್ದು ಮೃತಪಟ್ಟಿದೆ.

ಕೆಲ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ರಾಮು ಮತ್ತು ಶಾಂತಾ ಎಂಬುವರ ನಾಲ್ವರು ಪುತ್ರರಲ್ಲಿ ಕೊನೆಯವನಾದ ಯುವರಾಜ, ಮಂಗಳವಾರ ಸಂಜೆ ಮನೆ ಸಮೀಪದಲ್ಲಿರುವ ಯಾರ್ಡ್‌ನಲ್ಲಿ ರಾಶಿ ಹಾಕಿರುವ ಸಿಮೆಂಟ್ ಪೈಪ್‌ಗಳ ನಡುವೆ ಆಟವಾಡಲು ತೆರಳಿದ್ದ ಎನ್ನಲಾಗಿದೆ. ಆಟವಾಡುತ್ತಿದ್ದ ಸಂದರ್ಭ ಏಕಾಏಕಿ ಪೈಪ್ ಉರುಳಿ ಬಿದ್ದಿದೆ.

ಸ್ಥಳದಲ್ಲಿ ಆಟವಾಡುತ್ತಿದ್ದ ಉಳಿದ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಮನೆಯವರು ಓಡಿ ಬಂದು ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದು, ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಯಾರ್ಡ್‌ಗೆ ಸರಿಯಾದ ಆವರಣ ಮತ್ತು ಗೇಟ್ ವ್ಯವಸ್ಥೆ ಇಲ್ಲದಿರುವುದು ಮಕ್ಕಳು ಆಡಲು ಹೊಗಿ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net