

ತಾವರಗೇರಾ: ಆರಂಭಿಕ ಶಿಕ್ಷಣದಲ್ಲಿ ಬುನಾದಿ ಕಲಿಕಾ ಸಾಮರ್ಥ್ಯಗಳನ್ನು ಅಭಿವೃದ್ಧಿ ಗೊಳಿಸುವುದರ ಮೂಲಕ ಮಕ್ಕಳ ಸವಾರ್ಂಗೀಣ ವಿಕಾಸಕ್ಕೆ ಶಿಕ್ಷಕರು ಶ್ರಮಿಸಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ ಹೇಳಿದರು.
ಇದನ್ನೂ ಓದಿ: http://ಮಕ್ಕಳ ವಿಕಾಸಕ್ಕೆ ಶಿಕ್ಷಕರು ಶ್ರಮ ಅಗತ್ಯ.
ತಾವರಗೇರಾ ಪಟ್ಟಣದ ತಾವರಗೇರಾ ವಲಯದ ನಲಿಕಲಿ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಲಿಕಲಿ ನೋಡಲ್ ಬಿಆರ್‌ಪಿ ಡಾ.ಜೀವನ್ ಸಾಬ್ ವಾಲಿಕಾರ್ ಮಾತನಾಡಿ,
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಪಠ್ಯಕ್ರಮ ಚೌಕಟ್ಟಿನ ಆಶಯಗಳಿಗೆ ತಕ್ಕಂತೆ ಆರಂಭಿಕ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಸವಾರ್ಂಗೀಣ ವಿಕಾಸ ಹೊಂದುವಂತೆ ಅಣಿಗೊಳಿಸಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ.
ನಲಿ ಕಲಿ ವಿಧಾನವು ಸ್ವಕಲಿಕೆ, ಸ್ವವೇಗದ ಕಲಿಕೆ ಮತ್ತು ಸಂತಸದ ಕಲಿಕಾ ತತ್ವಗಳಿಗೆ ಅನುಗುಣವಾಗಿ ಸಾಗಬೇಕು. ವಿದ್ಯಾರ್ಥಿಗಳು ಒತ್ತಡ ರಹಿತ ಕಲಿಕೆಗೆ ಸಹಾಯಕವಾಗುವಂತೆ ರೂಪಿತವಾದ ಚಟುವಟಿಕೆಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನಗೊಳಿಸಿ.
ತರಗತಿ ಕೋಣೆಯ ಸಿದ್ಧತೆ ಮತ್ತು ವಿದ್ಯಾರ್ಥಿಗಳನ್ನು ಕಲಿಕೆಗೆ ಸಿದ್ಧಗೊಳಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸಿಆರ್‌ಪಿ ಕಾಶಿನಾಥ್ ನಾಗಲೀಕರ್, ರಾಜೇಶ್ವರಿ, ಗಿರಿಜಾ ಹಿರೇಮಠ್, ಸರೋಜಾ ಇದ್ದರು.