ಹಾಲು ಕುಡಿಸಿ ಮಲಗಿಸಿದ ಶಿಶು ಸಾವು

Dead Child 4 Feb 20
Published on


ಕುಂದಾಪುರ: ಹಾಲು ಕುಡಿಸಿ ಮಲಗಿಸಿದ ಮಗುವಿನ ಆರೋಗ್ಯ ಏರುಪೇರಾಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಉಪ್ಪುಂದ ಗ್ರಾಮದ ಜನತಾ ಕಾಲನಿ ನಿವಾಸಿ ಶೈಲಾ ಎಂಬವರ ಪುತ್ರಿ ಸಾನ್ವಿತಾ (4 ತಿಂಗಳು) ಮೃತಪಟ್ಟ ಮಗು.

ತಾಯಿ ಶೈಲಾ ರಾತ್ರಿ ಮಗುವಿಗೆ ಹಾಲು ಕುಡಿಸಿ ಮಲಗಿಸುವ ವೇಳೆ ಸಾನ್ವಿ ಆರೋಗ್ಯದಲ್ಲಿ ಏರುಪೇರಾಯಿತು. ಬೈಂದೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರಕ್ಕೆ ಹೋಗಲು ತಿಳಿಸಿದ್ದರು.

ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net