

ಬಾದಾಮಿ: ಗ್ರಾಮೀಣರಿಗೆ ಶಿಶುಪಾಲನಾ ಕೇಂದ್ರಗಳು ವರದಾನವಾಗಿವೆ ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ, ಪ್ರಭಾರಿ ತಾಪಂ ಇಒ ಅಶೋಕ ತಿರಕನ್ನವರ ಹೇಳಿದರು.
ತಾಪಂ ಸಭಾಭವನದಲ್ಲಿ ನರೇಗಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಶಿಶುಪಾಲನಾ ಕೇಂದ್ರದ ನಿರ್ವಹಣೆಗಾಗಿ ಮಹಿಳಾ ಆರೈಕೆದಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಗ್ರಾಮೀಣಾಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಒಂದಲ್ಲ, ಒಂದು ಹೊಸ ಕಾರ್ಯಕ್ರಮ ಜಾರಿಗೊಳಿಸುತ್ತಲೇ ಇದ್ದು, ಶಿಶುಪಾಲನಾ ಕೇಂದ್ರ ಹೊಸ ಸೇರ್ಪಡೆಯಾಗಿದೆ. ಮಗುವಿನ ಬೆಳವಣಿಗೆಗೆ ಉತ್ತಮ ವಾತಾವರಣ ರೂಪಿಸಲಿದೆ ಎಂದರು.
ಬಾದಾಮಿ ತಾಪಂ ಸಹಾಯಕ ನಿರ್ದೇಶಕ ಸಂತೋಷ ಮೊಕಾಶಿ ಮಾತನಾಡಿ, 6 ತಿಂಗಳಿನಿಂದ 6 ವರ್ಷದೊಳಗಿನ ಮಗುವಿನ ಆರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೈಕೆದಾರರರಿಗೆ ತರಬೇತಿ ನೀಡುತ್ತಿದ್ದು, ತರಬೇತಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಳೇದಗುಡ್ಡ ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ ಮಾತನಾಡಿ, ಮಗುವಿನ ಆರೈಕೆ, ಪಾಲನೆಯಲ್ಲಿ ಆರೈಕೆದಾರರ ಪಾತ್ರ ಮಹತ್ವದಾಗಿದ್ದು, ತರಬೇತಿ ಚೆನ್ನಾಗಿ ಪಡೆದು ಯೋಜನೆ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಹುನಗುಂದ ತಾಲೂಕಿನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಾಸ್ಟರ್ ಟ್ರೇನರ್‌ಗಳಾದ ವೆಂಕಪ್ಪ ಗಿರಿತಮ್ಮನವರ, ಬಸವರಾಜ ಕೊಪ್ಪದ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರಾದ ರೇಣುಕಾ ಗೌಡರ, ರೇಣುಕಾ ಪೂಜಾರ, ಶಿಶುಪಾಲನಾ ಕೇಂದ್ರ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ ಸುರೇಶ ಪೋತರಡ್ಡಿ, ಯಮನಪ್ಪ ತಳವಾರ, ಸಮೀರ ಉಮರ್ಜಿ, ವಿಜಯಕುಮಾರ ಚಿಂದಿ ಹಾಜರಿದ್ದರು.