

ಗಂಗೊಳ್ಳಿ: ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದಿರುವ ಗಂಗೊಳ್ಳಿ ಗ್ರಾಮದ ಗುಡ್ಡೆಕೇರಿ ನಿವಾಸಿ ಶ್ರೀಧರ್-ರಾಜೇಶ್ವರಿ ದಂಪತಿ ಮೇಲೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2022ರ ಜುಲೈ 16ರಂದು 9 ತಿಂಗಳ ಹೆಣ್ಣು ಮಗುವನ್ನು ಶಿರಸಿಯಿಂದ ಯಾವುದೇ ದಾಖಲೆಗಳಿಲ್ಲದೆ ತಂದು ಸಾಕುತ್ತಿರುವುದಾಗಿ ತಿಳಿದು ಬಂದಿದೆ. ಈ ಮಗುವನ್ನು ಯಾರಿಂದ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಮಗುವಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದಂಪತಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ತಿಳಿಸಿದ್ದರೂ, ಈವರೆಗೂ ದಾಖಲೆಗಳನ್ನು ಹಾಜರುಪಡಿಸಿಲ್ಲ.
ಮಗುವನ್ನು ರಕ್ಷಣೆ ಮಾಡಿ ಅರ್ಹ ದತ್ತು ಸಂಸ್ಥೆಯ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಗೆ ತಿಳಿಸಲಾಗಿದೆ.