ಚಿಲವಾರು ಬಂಡಿ ಯೋಜನೆ ಶೀಘ್ರ ಲೋಕಾರ್ಪಣೆ

17 HBH 04
ಕಡಲಬಾಳು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ ನಾಯ್ಕ ಗುರುವಾರ ಉದ್ಘಾಟಿಸಿದರು. ಡಾ.ಹಿರಿಯ ಶಾಂತವೀರ ಸ್ವಾಮೀಜಿ, ಡಾ.ಮಹೇಶ್ವರ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ರಾಜ್ಯದ ರಸ್ತೆಗಳೆಲ್ಲ ಗುಂಡಿಗಳಿಂದ ಕೂಡಿದ್ದು, ಹೊಸದಾಗಿ ಮದುವೆಯಾದ ದಂಪತಿಗಳು ಎಚ್ಚರಿಕೆಯಿಂದ ಓಡಾಡಿ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹಾಸ್ಯ ಚಟಾಕಿಯೊಂದಿಗೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ಗವಿಸಿದ್ಧೇಶ್ವರ ಮಠದಲ್ಲಿ ಗುರುವಾರ ಶಶಿಧರ ಶಿವಾಚಾರ್ಯ ನ್ಯೂ ಸವ್ಯಸಾಚಿ ಮಿತ್ರ ಮಂಡಳಿ ಸಹಯೋಗದೊಂದಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶಿವಶಾಂತವೀರ ಶ್ರೀಗಳ ಪುಣ್ಯಾರಾಧನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಎಲ್ಲ ಕ್ಷೇತ್ರಗಳ ಶಾಸಕರು ರಸ್ತೆಗಳ ಪರಿಸ್ಥಿತಿ ಬಗ್ಗೆ ಪ್ರಶ್ನಿಸಿ, ದುರಸ್ತಿಗೆ ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನೀರಾವರಿಗೆ ಒತ್ತು ನೀಡಿದ್ದು, ಈ ವ್ಯಾಪ್ತಿಯ ಚಿಲವಾರು ಬಂಡಿ ಏತ ನೀರಾವರಿ ಯೋಜನೆ ಕಾಮಗಾರಿ ಮುಗಿದಿದೆ. ಶೀಘ್ರವೇ ಕೃಷಿ ಬಳಕೆಗೆ ಒದಗಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಅನುದಾನವಿಲ್ಲದೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ವಿವಿಧ ಯೋಜನೆಯಡಿ ಅಭಿವೃದ್ಧಿಗಾಗಿ ತಲಾ 50ಲಕ್ಷ ರೂ. ಅನುದಾನ ನೀಡಲಾಗುವುದು. ಇಲ್ಲಿಯ ಕಾಯಕ ಭವನ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕಳೆದ ವರ್ಷ ಇದೇ ವೇದಿಕೆಯಲ್ಲಿ ಮಾತು ಕೊಟ್ಟಂತೆ, ಕಾಯಕ ಭವನ ಉದ್ಘಾಟಿಸಿದ್ದೇನೆೆ ಎಂದರು. 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹಡಗಲಿಯ ಗವಿಸಿದ್ಧೇಶ್ವರ ಮಠದ ಡಾ.ಹಿರಿಯ ಶಾಂತವೀರ ಸ್ವಾಮೀಜಿ, ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಗ್ರಾಪಂ ಅಧ್ಯಕ್ಷೆ ಲತಾ ರಾಜಕುಮಾರ, ಉಪಾಧ್ಯಕ್ಷೆ ಶಾಂತಮ್ಮ ನಾಗರಾಜ, ಮುಖಂಡರಾದ ಬ್ಯಾಟಿ ನಾಗರಾಜ, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಕೃಷ್ಣಮೂರ್ತಿ, ಟಿ.ಎಂ.ಶರಣಯ್ಯ, ಕೆ.ಸಂತೋಷ, ಓ.ವಿರೂಪಣ್ಣ, ಕೆ.ಮುತ್ತಪ್ಪ, ಬಿ.ಬಸವರಾಜ, ಎಚ್.ದೊಡ್ಡಬಸಪ್ಪ, ಸಿ.ರಮೇಶ, ಅನಿಲ್, ಪುಟಾಣಿ ಮಂಜುನಾಥ, ಪಿಡಿಒ ಎಂ.ನಿಂಗಪ್ಪ, ಆರ್.ವೆಂಕಟೇಶ, ಮಂಜುನಾಥ ಗೌಡ, ಹನಸಿ ಸಿದ್ದೇಶ, ಎಚ್.ಕೆ.ಗುರುರಾಜ, ಕೆ.ಗಣೇಶ, ಎ.ಎಂ.ನಾಗರಾಜ, ಎಚ್.ಕೆ.ವಿರೂಪಾಕ್ಷಿ, ಎ.ಎಂ.ಕೊಟ್ರೇಶ, ಎಚ್.ಶಿವರಾಜ, ಎಸ್.ಕೆ.ರುದ್ರೇಶ, ಶಿಕ್ಷಕ ಗಂಗಾಧರಯ್ಯ, ಗವಿಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net