ಬಿಎಸ್‌ಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಿಕ್ಕತುಂಬಳ ರಾಜೀನಾಮೆ

chiktumbala
Published on

ಹುಬ್ಬಳ್ಳಿ: ಬಹುಜನ ಸಮಾಜ ಪಕ್ಷದ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಪ್ರೇಮನಾಥ ಚಿಕ್ಕತುಂಬಳ ಅವರು ರಾಜೀನಾಮೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮನಾಥ ಚಿಕ್ಕತುಂಬಳ ಅವರು, 2012ರಿಂದ ಕೇಂದ್ರದಲ್ಲಿ ಪಕ್ಷದ ಅಧಿಕಾರವು ಕ್ಷೀಣಿಸುತ್ತಿದ್ದು, ರಾಜ್ಯದಲ್ಲಿಯೂ ಪಕ್ಷದ ರಾಜಕೀಯ ಅಧಿಕಾರದ ಚಟುಟಿಕೆಗಳು ಹೆಚ್ಚಾಗುತ್ತಿಲ್ಲ. ಜಿಲ್ಲೆಯಲ್ಲಿಯೂ ಯಾವುದೇ ಬದಲಾವಣೆ ಕಾಣದಿರುವ ಕಾರಣದಿಂದ ಪಕ್ಷ ತೊರೆಯುತ್ತಿದ್ದೇನೆ. ಜ. 24ರಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಅಂಚೆ ಪತ್ರದ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದು ವಿವರಿಸಿದರು.
ಪ್ರಮುಖರಾದ ಮಂಜುನಾಥ ಆರೇರ, ಅಬ್ದುಲ್‌ಬಾರಿ ದೇಸಾಯಿ, ಖಾಜಾ ಹುಸೇನ್ ದೇವದುರ್ಗ, ಚನ್ನಮ್ಮ ಪಡೇಸೂರ, ಗಿರಿಜಯಮ್ಮ ಕ್ಯಾಲಕೊಂಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net